ತಮ್ಮದೇ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಪ್ರಚಾರ ; ವಿಚಿತ್ರ ಸನ್ನಿವೇಶ ಉಂಟಾದ ಕ್ಷೇತ್ರ ಯಾವುದು ಗೊತ್ತಾ….?
ರಾಜಸ್ಥಾನ : ಸಾಮಾನ್ಯವಾಗಿ ತಮ್ಮದೇ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ಆಯಾ ಪಕ್ಷಗಳು ಮತ ಕೇಳುವುದು ಸಾಮಾನ್ಯ. ಆದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ತನ್ನದೇ ಪಕ್ಷದ ಮುಖಂಡರು ಮತ ನೀಡಬೇಡಿ ಎಂದು ಹೇಳುವ ವಿಚಿತ್ರ ಸನ್ನಿವೇಶ ಎದುರಾಗಿದೆ.
ಹೌದು ರಾಜಸ್ಥಾನದ ಬಸ್ಸವಾರಾ – ಡುಂಗರ್ ಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಪಡೆದು ಅರವಿಂದ ದಾಮೋರ್ ಎಂಬುವವರು ಕಣಕ್ಕೆ ಇಳಿದುದ್ದರು. ನಂತರ ಬುಡಕಟ್ಟು ಜನ ಅಧಿಕವಾಗಿರುವ ಈ ಕ್ಷೇತ್ರದಲ್ಲಿ ಭಾರತ್ ಆಧಿವಾಸಿ ಪಕ್ಷದ ( ಬಿಎಪಿ ) ಅಭ್ಯರ್ಥಿ ರಾಜಕುಮಾರ ಕಣಕ್ಕೆ ಇಳಿದ ಪರಿಣಾಮ ಕೊನೆ ಕ್ಷಣದಲ್ಲಿ ಇವರನ್ನು ಬಬಲಿಸಲು ಕಾಂಗ್ರೆಸ್ ನಿರ್ಧರಿಸಿತ್ತು.
ಕಾಂಗ್ರೆಸ್ ಅಭ್ಯರ್ಥಿಗೆ ನಾಮಪತ್ರ ವಾಪಸ್ ತಗೆದುಕೊಳ್ಳುವಂತೆ ತಿಳಿಸಲಾಗಿತ್ತು. ಆದರೆ ಕೈ ಅಭ್ಯರ್ಥಿ ಅರವಿಂದ ದಾಮೋರ್ ಅವರು ನಾಮಪತ್ರ ಹಿಂತಗೆದುಕೊಳ್ಳುವ ಕೊನೆಯ ದಿನದವರೆಗೂ ನಾಪತ್ತೆಯಾಗಿ ಕೈಗೆ ಚಳ್ಳೆಹಣ್ಣು ತಿನಿಸಿದರು. ಈಗ ಅನಾಯಾಸವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಕೈ ಅಭ್ಯರ್ಥಿ ನಾಮಪತ್ರ ಹಿಂತಗೆದುಕೊಳ್ಳದ ಕಾರಣ ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್ ತನ್ನದೇ ಅಭ್ಯರ್ಥಿ ವಿರುದ್ಧ ಮತ ಹಾಕದಂತೆ ಪ್ರಚಾರ ನಡೆಸುತ್ತಿದೆ. ಜೊತೆಗೆ ಭಾರತ್ ಆಧಿವಾಸಿ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದೆ. ಇತ್ತ ಕೈ ಅಭ್ಯರ್ಥಿ ಪ್ರಚಾರ ಜೋರು ನಡೆಸಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದ್ದ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್ ಎಡವಟ್ಟಿನ ಪರಿಣಾಮ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜೊತೆಗೆ ಬಿಜೆಪಿ ಅಭ್ಯರ್ಥಿ ಮಹೇಂದ್ರಜಿತ್ ಸಿಂಗ್ ಮಾಳವೀಯ ಅವರಿಗೆ ಅನುಕೂಲವಾಗಿದ್ದು ಗೆಲುವಿಗೆ ಸಹಕಾರಿ ಆಗಿದೆ ಎಂದು ಹೇಳಲಾಗುತ್ತಿದೆ
In Rajasthan’s Banswara Lok Sabha seat, Congress campaigning against own candidate


