Select Page

ದೇಶ ಸುಭದ್ರವಾಗಿರಲು ಮೋದಿ ಅನಿವಾರ್ಯ : ರೂಪಾಲಿ ಹೊಸಕೊಟಿ

ದೇಶ ಸುಭದ್ರವಾಗಿರಲು ಮೋದಿ ಅನಿವಾರ್ಯ : ರೂಪಾಲಿ ಹೊಸಕೊಟಿ

ಬೆಳಗಾವಿ :  ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲು ಕೇಂದ್ರ ಸರ್ಕಾರದ ಕೊಡುಗೆ ಅಪಾರವಾಗಿದೆ .ಭಾರತದ ಪ್ರಜೆಗಳ ಭವಿಷ್ಯ ಉಜ್ವಲವಾಗಿರಬೇಕಾದರೆ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸಿಬೇಕು ಎಂದು ಮಹಿಳಾ ನಾಯಕಿ ರೂಪಾಲಿ ಹೊಸಕೊಟಿ ಅಭಿಪ್ರಾಯಪಟ್ಟರು.

ಬೆಳಗಾವಿಯ ವೈಭವನಗರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ನಡೆದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಇವರು. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಿಂದ ಒಂದು ದಿನ ರಜೆ ಪಡೆಯದೆ ನಿರಂತರ ಶ್ರಮಿಸುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸುವ ಮೂಲಕ ಮೋದಿಯವರ ಕೈ ಬಲಪಡಿಸಲು ಮಹಿಳೆಯರು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಮಂಗಳಾ ಅಂಗಡಿ. ರೂಪಾಲಿ ಅವರು ನಿರಂತರ ಸಮಾಜಸೇವೆಯಲ್ಲಿ ತೊಡಗಿಕೊಂಡ ಮಹಿಳೆ. ಸದಾಕಾಲವೂ ದೇಶಪರ ಚಿಂತನೆ ಹೊಂದಿರುವ ಇವರ ಉತ್ಸಾಹ ಮತ್ತೊಬ್ಬರಿಗೆ ಮಾದರಿ. ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ನಿಮ್ಮ ಪ್ರೀತಿಗೆ ನಾನು ಯಾವತ್ತೂ ಆಭಾರಿ ಎಂದರು.

ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಮಾತನಾಡಿ. ಈವರೆಗೂ ಬೆಳಗಾವಿ ಜನ ಅಂಗಡಿ ಕುಟುಂಬಕ್ಕೆ ಸಾಕಷ್ಟು ಪ್ರೀತಿ ಹಾಗೂ ಸಹಕಾರ ನೀಡಿದ್ದೀರಿ. ದಿ. ಸುರೇಶ್ ಅಂಗಡಿ ಹಾಗೂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಈ ಬಾರಿ ಬಿಜೆಪಿ ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಿಲ್ಪಾ ಶೆಟ್ಟರ್, ಶೀಲಾ ಗಡಕರಿ,  ಶಶಿಕಲಾ ಅಂಗಡಿ ಸೇರಿದಂತೆ ಬಿಜೆಪಿ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿ ಇಡೀ ಜಗತ್ತಿಗೆ ಹೆಮ್ಮೆ ತರಿಸಿದೆ. ದಶಕಗಳ ನಂತರ ಭಾರತಕ್ಕೆ ಒಬ್ಬ ಸಮರ್ಥ ನಾಯಕತ್ವ ಲಭಿಸಿದ್ದು ನಮ್ಮ ಪುಣ್ಯ. ಈ ಬಾರಿ ಬಿಜೆಪಿ 400 ಕ್ಕೂ ಅಧಿಕ ಸ್ಥಾನದಿಂದ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ.

ರೂಪಾಲಿ ಹೊಸಕೊಟಿ
ಬಿಜೆಪಿ ಕಾರ್ಯಕರ್ತೆ

Advertisement

Leave a reply

Your email address will not be published. Required fields are marked *

error: Content is protected !!