ಬೆಳಗಾವಿ : ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಇಡೀ ಜಗತ್ತೇ ಕೊಂಡಾಡುವ ಸಂದರ್ಭದಲ್ಲಿ ನಟ ಹಾಗೂ ಸಾಮಾಜಿಕ ಚಿಂತಕ ಪ್ರಕಾಶ್ ರಾಜ್ ವಿಷಕಾರಿದ್ದಾರೆ.

ಬೆಳಗಾವಿ ನಗರದಲ್ಲಿ ನಡೆದ ಸಮಾವೇಶದಲ್ಲಿ ಭಾಷಣದ ಉದ್ದಕ್ಕೂ ಪ್ರಧಾನಿ‌ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ವಿಷಕಾರಿದ್ದಾರೆ‌. ಮೋದಿಯವರ ಯಾವುದೇ ಕಾರ್ಯಕ್ಕೂ ಅತೃಪ್ತ ಆತ್ಮವಾಗಿ ವರ್ತಿಸುವ ಪ್ರಕಾಶ್ ರಾಜ್ ನಡವಳಿಕೆ ಇದೆ ಮೊದಲಲ್ಲ.

ಮಹಾಪ್ರಭುವಿನ ದೊಂಬರಾಟದಲ್ಲಿ ಮಂಗಗಳು ಆಗೋದು ಜನಸಾಮಾನ್ಯರು. ಪ್ರತಿಯೊಂದನ್ನು ಪ್ರಶ್ನಿಸಬೇಕು. ಇಲ್ಲದಿದ್ದರೆ ನಿಮ್ಮ ಅಂತ್ಯವಾಗುತ್ತದೆ‌. ಪುಷ್ಪಕ ವಿಮಾನ, ಸಂವಿಧಾನ‌ ಬದಲಿಸುವುದು, ಒಂದೇ ಪಕ್ಷ ಅಂತಾ ಅವರೆಲ್ಲಾ ಚೆನ್ನಾಗಿದ್ದಾರೆ.

ಒಂದೇ ಭಾಷೆ, ಒಂದೇ ಪಕ್ಷ, ಒಂದೇ ಪ್ರಭುವಿನಂತಿರುವ ಈ ಮಹಾಪ್ರಭುವಿಗೆ ಎರಡು ನಾಲಿಗೆ. ಎರಡು ನಾಲಿಗೆ ಹಾವು ಈ ಮಹಾಪ್ರಭು ಎಂದೆಲ್ಲಾ ಪ್ರಧಾನಿ‌ ಮೋದಿ ವಿರುದ್ಧ ಬಹುಭಾಷಾ ನಟ ಪ್ರಕಾಶ ರಾಜ್ ವಾಗ್ದಾಳಿ ಮಾಡಿದ್ದಾನೆ.

ಬೆಳಗಾವಿ ಜನ‌ ವಿಚಾರ ಮಾಡರಿ. ಸ್ಮಾರ್ಟ್ ಸಿಟಿ ಎಂದರು, ಎಲ್ಲಿ ಆಗಿದೆ ಸ್ಮಾರ್ಟ್..? ಪ್ರತಿ ಸಂಸದರು ಒಂದು ಹಳ್ಳಿ ದತ್ತು ತೆಗೆದುಕೊಂಡು ಮಾದರಿ ಮಾಡಬೇಕೆಂದು ಹೇಳಿ ಹತ್ತು ವರ್ಷ ಆಗಿದೆ.‌ ಒಂದಾದ್ರೂ ಹಳ್ಳಿ ಮಾದರಿ ಆಗಿದೆಯಾ ಎಂದು ಪ್ರಶ್ನಿಸಿದ ಪ್ರಕಾಶ ರಾಜ್, ಕರ್ನಾಟಕಕ್ಕೆ ನಮ್ಮ ನುಡಿಗೆ ನಮ್ಮ ನಾಯಕ ಬೇಕು.

ಅಲ್ಲಿ ಯಾರೋ ಕುಳಿತವನ ಮುಖ ನೋಡಿ ಮತ ಹಾಕೋದಲ್ಲ. ನಿಮ್ಮ ಪ್ರತಿನಿಧಿಗೆ ಹಾಕಬೇಕು. ನಿಮ್ಮ ನೋವು, ಮಾತು, ಭಾಷೆ, ಸಮಸ್ಯೆ ತೆಗೆದುಕೊಂಡು ಪಾರ್ಲಿಮೆಂಟ್ ಹೋಗುವ ಅಭ್ಯರ್ಥಿಗೆ ಮತ ಹಾಕಬೇಕು. ಅವರ ಮುಖ ನೋಡಿ ವೋಟ್ ಹಾಕಿದರೆ ಕಂಗಣಾ ರಣಾವತ್ ಗೆ ವೋಟ್ ಹಾಕಿದಂತೆ ಆಗುತ್ತದೆ.

ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಷಚಂದ್ರ ಬೋಸ್, ಇಂಥವರಿಗೆ ಮತ ಹಾಕಿದರೆ ದೇಶ ಉದ್ದಾರ ಆಗುತ್ತಾ..? ಮುಂದಿನ ಪೀಳಿಗೆ ಬದುಕಲು ಸರಿಯಾದ ಪ್ರತಿನಿಧಿಗೆ ಮತ ನೀಡಿ ಆರಿಸಿರಿ. ನಿಜವಾದ ದೇಶಭಕ್ತರಾದರೆ, ಮನುಷ್ಯರಾದರೆ ಈ ಸರ್ವಾಧಿಕಾರಿಯನ್ನು ಅಧಿಕಾರದಿಂದ ಕೆಳಗಿಳಿಸುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ಪ್ರಧಾನಿ ಮೋದಿ ವಿರುದ್ಧ ಪ್ರಕಾಶ ರಾಜ್ ಮಾತನಾಡಿದ.