ಲೋಕಸಭಾ ಚುನಾವಣೆ ; ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ, ಯಾರಿಗೆಲ್ಲಾ ಚಾನ್ಸ್ …?
ಬೆಂಗಳೂರು : ಸಧ್ಯ ದೇಶಾದ್ಯಂತ ಲೋಕಸಭಾ ಚುನಾವಣೆ ಬಿಸಿ ಜೋರಾಗಿದ್ದು ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ರಾಜ್ಯದ ಏಳು ಜನರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ.
ಕಾಂಗ್ರೆಸ್ ನ ಮೊದಲ ಪಟ್ಟಿಯಲ್ಲಿ ರಾಜ್ಯದ ಏಳು ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಈ ಕೆಳಗಿನಂತಿದೆ. ವಿಜಯಪುರ – ಹೆಚ್,ಆರ್ ಅಲಗೂರು, ಹಾವೇರಿ – ಆನಂದಸ್ವಾಮಿ ಗಡ್ಡದೇವರಮಠ, ಶಿವಮೊಗ್ಗ – ಗೀತಾ ಶಿವರಾಜಕುಮಾರ, ಹಾಸನ – ಶ್ರೇಯಸ್ ಪಟೇಲ್.
ತುಮಕೂರು – ಮುದ್ದಹನುಮೇಗೌಡ, ಮಂಡ್ಯ – ಸ್ಟಾರ್ ಚಂದ್ರು, ಬೆಂಗಳೂರು ರೂರಲ್ – ಡಿ.ಕೆ ಸುರೇಶ್ ಅವರ ಹೆಸರುಗಳನ್ನು ಘೋಷಣೆ ಮಾಡಲಾಗಿದೆ.


