ಕಾಗವಾಡದಲ್ಲಿ ಭೀಕರ ದುರಂತ ; ಟ್ರ್ಯಾಕ್ಟರ್ ಪಲ್ಟಿ ಆಗಿ ಮೂವರು ಸಾವು
ಕಾಗವಾಡ : ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿ ಆಗಿ ಕೂಲಿ ಕೆಲಸಕ್ಕೆ ತೆರಳಿದ್ದ ನಾಲ್ವರು ಮಹಿಳೆಯರು ಮೃತಪಟ್ಟ ಘಟನೆ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಶೇಡಬಾಳದ ನಿವಾಸಿಗಳಾದ ಚಂಪಾ ಲಕ್ಕಪ್ಪ ತಳಕ್ಕಟಿ (45), ಭಾರತಿ ವಡ್ಡಾಳೆ (30), ಮಾಲು ರಾವಸಾಬ ಐನಾಪೂರ (55) ಸ್ಥಳದಲ್ಲಿಯೇ ಸಾವಣಪ್ಪಿದ್ದು, ಮೀರಜ್ ಆಸ್ಪತ್ರೆಗೆ ದಾಖಲಾಗಿದ್ದ ಶೇಕವ್ವಾ ನರಸಪ್ಪ ಸರಸಾಯಿ (38) ಪರಿಸ್ಥಿತಿ ಗಂಭೀರವಾಗಿದೆ.
ಕೂಲಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದ ಮಹಿಳೆಯರ ಬದುಕಲ್ಲಿ ದಾರುಣ ಘಟನೆ ಸಂಭವಿಸಿದೆ. ಕಬ್ಬು ತುಂಬಿದ್ದ ಟ್ರಾಕ್ಟರ್ ಟ್ರೇಲರ್ ಗಾಲಿ ಬಿಚ್ಚಿದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಇನ್ನೂ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ರಾಜು ಕಾಗೆ ಸ್ಥಳಕ್ಕೆ ಭೇಟಿ ನೀಡಿ ಗಾಯಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


