Select Page

Advertisement

ಮೇಕೆ ದಾಟು ಹೋರಾಟದಿಂದ ಕೇವಲ ಲಂಡು ಬಿದ್ದಿದೆ ಅಷ್ಟೇ – ಯತ್ನಾಳ್ ವ್ಯಂಗ್ಯ

ಮೇಕೆ ದಾಟು ಹೋರಾಟದಿಂದ ಕೇವಲ ಲಂಡು ಬಿದ್ದಿದೆ ಅಷ್ಟೇ – ಯತ್ನಾಳ್ ವ್ಯಂಗ್ಯ

ಬೆಳಗಾವಿ : ಮೇಕೆದಾಟು ಹೋರಾಟದ ಮೂಲಕ ಜನರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದವರು ಪಾದಯಾತ್ರೆಯಲ್ಲಿ ಅಲ್ಲಿನ ಮೇಕೆಗಳನ್ನು ತಿಂದು ಲಂಡು ಹಾಕಿದ್ದಾರೆ ಎಂದು ಹೇಳುವ ಮೂಲಕ ಡಿಕೆಶಿ ವಿರುದ್ಧ ಶಾಸಕ ಯತ್ನಾಳ್ ಪರೋಕ್ಷ ವಾಗ್ದಾಳಿ ನಡೆಸಿದರು.

ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಇವರು. ಮೇಕೆ ದಾಟು ಹೋರಾಟ ಕೇವಲ ಹೋರಾಟವಾಗಿಯೇ ಉಳಿಯಿತು. ಇದರಿಂದ ಜನರಿಗೆ ಯಾವುದೇ ಲಾಭ ಆಗಿಲ್ಲ. ಇಲ್ಲಿ ಹೋರಾಟ ಮಾಡಿದವರು ಮೇಕೆಗಳನ್ನು ತಿಂದು ಲಂಡು ಹಾಕಿದ್ದು ಬಿಟ್ಟರೆ ಬೇಕೆ ಏನು ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು‌.

ಉತ್ತರ ಕರ್ನಾಟಕ ಅಭಿವೃದ್ಧಿ ಕೇವಲ ಹೆಸರಿಗೆ ಮತ್ತು ಭಾಷಣಕ್ಕೆ ಸೀಮಿತವಾಗಿದೆ‌. ಹಿಂದಿನ ಯಾವುದೇ ಮುಖ್ಯಮಂತ್ರಿಗಳಿಂದ ಅಭಿವೃದ್ಧಿ ಆಗಿಲ್ಲ. ಕೇವಲ ಭರವಸೆ ಮೀಡುವುದು ಬಿಟ್ಟರೆ ಬೇರೆ ಪ್ರಯೋಜನ ಆಗಿಲ್ಲ ಎಂದರು.

ಹಿಂದುಳಿದ ತಾಲೂಕು ಅಭಿವೃದ್ಧಿಗೆ ಹೆಚ್ಚಿನ ಹಣ ನೀಡಬೇಕು. ರಾಜ್ಯದಲ್ಲಿ ಕನಕಪುರ ದಂತಹ ತಾಲೂಕು ಹಿಂದುಳಿದಿದ್ದು ವಿಪರ್ಯಾಸ. ಅಲ್ಲಿನ ಜನಪ್ರತಿನಿಧಿಗಳು ಕೇವಲ ತಮ್ಮ ಆದಾಯ ಜಾಸ್ತಿ ಮಾಡಿಕೊಂಡಿದ್ದು ಬಿಟ್ಟರೆ ಮತ್ತೇನು ಮಾಡಿಲ್ಲ ಎಂದು ಆರೋಪಿಸಿದರು.

ಕೃಷ್ಣಾ ಮೇಲ್ದಂಡೆ ಹಾಗೂ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಯಾವುದೇ ಸರ್ಕಾರಗಳು ಮುಂದಾಗುತ್ತಿಲ್ಲ. ಕೇವಲ ಅನುದಾನ ಘೋಷಣೆ ಮಾಡುತ್ತೇವೆ ಎಂದು ಹೇಳುತ್ತಾರೆ ಆದರೆ ಏನನ್ನು ಮಾಡಲ್ಲ. ಈಗ ಈ ಕೆಲಸ ಆಗಲಿಲ್ಲ ಎಂದರೆ ಯುಂದೆ ಯಾವತ್ತೂ ಆಗಲ್ಲ ಎಂದರು.

Advertisement

Leave a reply

Your email address will not be published. Required fields are marked *

error: Content is protected !!