ಬೆಳಗಾವಿ : ಬಿಜೆಪಿ ನೂತನ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರನ್ನು ಬೆಳಗಾವಿ ಬಿಜೆಪಿ ಘಟಕದ ಯುವ ನಾಯಕರಿಂದ ಶುಭಾಶಯ ಕೋರಲಾಯಿತು.

ಬೆಂಗಳೂರಿನ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದ್ದ ಮುಖಂಡರು ವಿಜಯೇಂದ್ರ ಅವರಿಗೆ ಶುಭಾಶಯ ತಿಳಿಸಿದರು‌. ಈ ಸಂದರ್ಭದಲ್ಲಿ ಯುವ ಮುಖಂಡರಾದ ವಿಜಯ್ ಗುಡದಾರಿ, ಮಂಜುನಾಥ ಪಮ್ಮಾರ, ಸುಭಾಸ್ ಪಾಟೀಲ ಹಾಗೂ ದಾದಾಗೌಡ ಬಿರಾದಾರ್ ಉಪಸ್ಥಿತರಿದ್ದರು.