ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯಲ್ಲಿ ಪೆಂಡೆಂಟ್ ಪತ್ತೆ ; ವಿಚಾರಣೆ
ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃನಾಲ್ ಹೆಬ್ಬಾಳ್ಕರ್ ಕೊರಳಲ್ಲಿ ಪೆಂಡೆಂಟ್ ಪತ್ತೆ ವಿಚಾರವಾಗಿ ಶುಕ್ರವಾರ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪೆಂಡೆಂಟ್ ಪಡೆದುಕೊಂಡರು.
ಸ್ವತಃ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಅಧಿಕಾರಿಗಳಿಗೆ ಪೆಂಡೆಂಟ್ ಕೊಟ್ಟು ಬೀಗರನ್ನು ಕಳುಹಿಸಲು ತೆರಳಿದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಡಿಸಿಎಫ್ ಶಂಕರ್ ಕಲ್ಲೋಳಿಕರ್. ಹುಲಿ ಉಗುರು ಇರುವ ಪೆಂಡೆಂಟ್ ವಶಕ್ಕೆ ಪಡೆಯಲಾಗಿದ್ದು ಎಫ್ಎಸ್ಎಲ್ ಗಾಗಿ ಬೆಂಗಳೂರಿಗೆ ಕಳುಹಿಸಲಾಗುತ್ತದೆ. ನಂತರ ಉಗುರು ಸತ್ಯಾಸತ್ಯತೆ ಕುರಿತು ಮಾಹಿತಿ ಬರಲಿದೆ ಎಂದರು.


