ಚೊಚ್ಚಲ ಸಿನೆಮಾದಲ್ಲಿ ನಟಿಸಿದ ಲಕ್ಷ್ಮಣ ಸವದಿ ; ಸಾಹುಕಾರ್ ಫುಲ್ ಮಿಂಚಿಂಗ್
ಲಕ್ಷ್ಮಣ ಸವದಿ (Lakshmana Savadi) ಸದ್ದಿಲ್ಲದೇ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ‘ದೇಸಾಯಿ’ (Desai) ಹೆಸರಿನ ಚಿತ್ರದಲ್ಲಿ ಅವರು ಅತಿಥಿ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ.
ನಾಗರೆಡ್ಡಿ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಮಹಾಂತೇಶ್ ಚೊಳಚಗುಡ್ಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ನಿರ್ಮಾಪಕರು ಆಪ್ತರು. ಆ ಕಾರಣದಿಂದಾಗಿ ಅವರು ಒಪ್ಪಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಲಕ್ಷ್ಮಣ ಸವದಿ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಕುಸ್ತಿ ಪಟುಗಳಿಗೆ ಬಹುಮಾನ ವಿತರಣಾ ಸಮಾರಂಭವೊಂದು ಸಿನಿಮಾದಲ್ಲಿದ್ದು, ಈ ಸಮಾರಂಭಕ್ಕೆ ಸವದಿ ಗೆಸ್ಟ್. ಗೆದ್ದವರಿಗೆ ಬಹುಮಾನ ನೀಡುವಂತಹ ಪಾತ್ರ ಅದಾಗಿದೆ.


