Select Page

Advertisement

ಗೋಕಾಕ್ : ಕುಖ್ಯಾತ ಖಿಲಾರಿ ಗ್ಯಾಂಗ್ ಬಂಧಿಸಿದ ಬೆಳಗಾವಿ ಪೊಲೀಸ್

ಗೋಕಾಕ್ : ಕುಖ್ಯಾತ ಖಿಲಾರಿ ಗ್ಯಾಂಗ್ ಬಂಧಿಸಿದ ಬೆಳಗಾವಿ ಪೊಲೀಸ್

ಬೆಳಗಾವಿ : ಗೋಕಾಕ್ ಭಾಗದಲ್ಲಿ ಕೊಲೆ, ಸುಲಿಗೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಕುಖ್ಯಾತ ಖಿಲಾರಿ ಗ್ಯಾಂಗ್ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು ದಶಕಗಳಿಂದ ಸುಮಾರು 50 ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ ಹಾಗೂ ಗೋಕಾಕ್ ನಗರವನ್ನೇ ಬೆಚ್ಚಿ ಬೀಳಿಸಿದ್ದ ಬೆಣಚಿಮರಡಿ ಖಿಲಾರಿ ಗ್ಯಾಂಗ್ ಬಂಧಿಸುವಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಬೆನ್ನಟ್ಟಿದ್ದ ಪೊಲೀಸರಿಗೆ, ಇದರಲ್ಲಿ ಭಾಗಿಯಾಗಿದ್ದು ಇದೆ ಖಿಲಾರಿ ಗ್ಯಾಂಗ ಸದಸ್ಯರು ಎಂದು ತಿಳಿದುಬಂದಿದೆ.

ಈಗಾಗಲೇ ಖಿಲಾರಿ ಗ್ಯಾಂಗ್ ನಲ್ಲಿ ಗುರುತಿಸಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 6 ಜನರ ತಂಡದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಬಲೆ ಬೀಸಿದ್ದಾರೆ.

ಕುಖ್ಯಾತ ಬೆಣಚಿಮರಡಿ ಕಿಲಾರಿ ಗ್ಯಾಂಗ್ ಸದಸ್ಯರು ಈ ಹಿಂದೆ ಎಸ್.ಪಿ ಸರ್ಕಾರ್ ಗ್ಯಾಂಗ್ ಜೊತೆ ಸೇರಿಕೊಂಡು ಗೋಕಾಕ್,‌ ಅಂಕಲಗಿ, ಘಟಪ್ರಭಾ, ಮೂಡಲಗಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕಳ್ಳತನ ಸೇರಿದಂತೆ ಅನೇಕ ಅಪರಾಧ ಪ್ರಕರಣ ನಡೆಸಿದ್ದು ತನಿಖೆಯಿಂದ ಬಯಲಾಗಿತ್ತು.

ಕೇವಲ 24 ಗಂಟೆಯಲ್ಲಿ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರು : ಕಳೆದ ನಾಲ್ಕು ದಿನಗಳ ಹಿಂದೆ ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಸಲಿಗೆ ಪ್ರಕರಣ ದಾಖಲಾಗಿತ್ತು. ಸಪ್ಟೆಂಬರ್ 5 ರಂದು ಆರೋಪಿ ಗೋಕಾಕ್ ಬಸ್ ನಿಲ್ದಾಣದಲ್ಲಿ ಮಹಿಳೆ ಹಾಗೂ ಪುರುಷನನ್ನು

ಚಹಾ ಕುಡಿಸುವ ನೆಪದಲ್ಲಿ ರೂಮಿಗೆ ಕರೆತಂದು ಮಹಿಳೆಯ ಮೇಲೆ ಐದು ಜನ ಆರೋಪಿತರು ನಿರಂತರ ಅತ್ಯಾಚಾರ ಮಾಡಿದ್ದರು. ನಂತರ ಮಹಿಳೆ ಹಾಗೂ ಪುರುಷನ ಬಳಿ ಇದ್ದ ಹಣ ಹಾಗೂ ಬಂಗಾರದ ಆಭರಣ ದೋಚಿ ಅವರಿಗೆ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು.

ಈ ಪ್ರಕರಣ ಬೆನ್ನಟ್ಟಿದ್ದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಮಾರ್ಗದರ್ಶನದ ಗೋಕಾಕ್ ನಗರ ಠಾಣೆಯ ಡಿಎಸ್ಪಿ, ಸಿಪಿಐ ಹಾಗೂ ಪಿಎಸ್ಐ ನೇತೃತ್ವದ ತಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಐದನೇ ಆರೋಪಿ ರಮೇಶ್ ಖಿಲಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ‌ ಮೇಲೆ ಪ್ರಕರಣ ದಾಖಲಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನರ ತಂಡ ಇದೇ ಕುಖ್ಯಾತ ಕಿಲಾರಿ ಗ್ಯಾಂಗ್ ಸದಸ್ಯರಾಗಿದ್ದರು. ಸಧ್ಯ ಗೋಕಾಕ್ ಜನರ ನಿದ್ದೆಗೆಡಿಸಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಬಂಧಿಸುವಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು ಎಸ್ಪಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಯಾವುದೇ ಅಪರಾಧ ಪ್ರಕರಣ ನಡೆದ ತಕ್ಷಣವೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ನನಗೆ ಕೂಡಲೇ ಅಪರಾಧಿಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ. ಗೋಕಾಕ್ ನಗರದಲ್ಲಿ ಕೊಲೆ, ಸುಲಿಗೆ ಆರೋಪಿಗಳನ್ನು ಬಂಧಿಸುವಲ್ಲಿ ನಮ್ಮ ಸಿಬ್ಬಂದಿಗಳ ಶ್ರಮ ಸಾಕಷ್ಟಿದ್ದು ಅವರಿಗೆ ವಿಶೇಷ ಧನ್ಯವಾದ.

ಭೀಮಾಶಂಕರ ಗುಳೇದ್
ಎಸ್ಪಿ ಬೆಳಗಾವಿ


Advertisement

Leave a reply

Your email address will not be published. Required fields are marked *

error: Content is protected !!