Breaking – ಬಿಜೆಪಿ ಮುಖಂಡನ ಅಶ್ಲೀಲ ವೀಡಿಯೋ ವೈರಲ್
ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರ ಆಪ್ತ ಎನ್ನಲಾಗುತ್ತಿರುವ ಒಬ್ಬರ ಅಶ್ಲೀಲ ವೀಡಿಯೋ ವೈರಲ್ ಆಗಿದೆ.
ತೀರ್ಥಹಳ್ಳಿಯ ಬಿಜೆಪಿ ಮುಖಂಡನಾದ ಸುಬ್ರಹ್ಮಣ್ಯ ಎಂಬುವವರ ಅಶ್ಲೀಲ ಭಂಗಿಯಲ್ಲಿನ ವೀಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾಗಿ ಯಾವೊಬ್ಬರು ಪ್ರತಿಕ್ರಿಯೆ ನೀಡಿಲ್ಲ.
ಕಳೆದ ಕೆಲ ದಿನಗಳ ಹಿಂದೆ ಜೆಡಿಎಸ್ ಮುಖಂಡರದ್ದು ಎನ್ನಲಾಗಿದ್ದ ಅಶ್ಲೀಲ ಪೋಟೋ ವೈರಲ್ ಆಗಿತ್ತು. ಸಧ್ಯ ಈ ಪ್ರಕರಣ ಮರೆಯುವ ಮುನ್ನವೇ ಬಿಜೆಪಿ ಮುಖಂಡನ ಕರ್ಮಕಾಂಡ ಬಯಲಿಗೆ ಬಂದಿದೆ.


