Select Page

Advertisement

ದೇಶದಲ್ಲೇ ಅತಿ ಹೆಚ್ಚು ಸುತ್ತಾಡಿದ ಸಂಸದ ನಾನೇ ಎಂದ ಅಣ್ಣಾಸಾಹೇಬ್ ಜೊಲ್ಲೆ

ಕಾಗವಾಡ : ಸಂಸದನಾಗಿ ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರದ ಸಾಧ್ಯವಾದ ಎಲ್ಲಾ ಹಳ್ಳಿಗೂ ತೆರಳಿ ಕೆಲಸ ಮಾಡಿದ್ದು ನನ್ನ ಪ್ರಕಾರ ದೇಶದಲ್ಲೇ ಅತಿ ಹೆಚ್ಚು ಸುತ್ತಾಡಿರುವ ಸಂಸದ ನಾನೇ ಎಂದು ಲೋಕಸಭಾ ಸದಸ್ಯ ಅಣ್ಣಾಸಾಹೇಬ್ ಜೊಲ್ಲೆ ಹೇಳಿಕೆ ನೀಡಿದ್ದಾರೆ.

ಗುರುವಾರ ಕಾಗವಾಡ ಪಟ್ಟಣದಲ್ಲಿ ಸಂಸದರ ಅನುದಾನದ ಅಡಿಯಲ್ಲಿ ನೂತನವಾಗಿ ನಿರ್ಮಾಣವಾದ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಇವರು. ನಾನು ಕೆಲ ಹಳ್ಳಿಗಳಿಗೆ ಭೇಟಿ ನೀಡಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ನನ್ನ ಅವಧಿಯಲ್ಲಿ ಸಾಕಷ್ಟು ಹಳ್ಳಿಗಳಿಗೆ ಅನುದಾನ ನೀಡಿ ಕೆಲಸ ಮಾಡಿರುವೆ. ದೇಶದಲ್ಲೇ ಅತಿ ಹೆಚ್ಚು ಸುತ್ತಾಡಿರುವ ಸಂಸದ ನಾನೇ ಎಂದು ಅಭಿಪ್ರಾಯಪಟ್ಟರು.

ಲೋಕಸಭಾ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿರುವ ಇವರು. ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ಇದೆ. ಆದರೆ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ನಿಷ್ಟೆ ಹೊಂದಿದ್ದೇವೆ. ಬೇರೆಯವರು ಟಿಕೆಟ್ ಕೇಳುತ್ತಿದ್ದಾರೆ ಎಂದು ಹೇಳಿದರು.

ಬರಗಾಲ ಪೀಡಿತ ಪ್ರದೇಶಕ್ಕೆ ಅನುದಾನ ನೀಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ನಮ್ಮ ಪಕ್ಷದಿಂದ ಮತ್ತೊಮ್ಮೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸುತ್ತೇವೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತೇವೆ ಎಂದರು.

Leave a reply

Your email address will not be published. Required fields are marked *

error: Content is protected !!