Select Page

Advertisement

ಉಪ್ಪಿಟ್ಟಲ್ಲಿ ಗಂಡನ ತಿಥಿ ಮಾಡಲು ಪತ್ನಿ ಸಂಚು ; ಸತ್ತಿದ್ದು ಬೆಕ್ಕು, ನಾಯಿ- ಬದುಕಿದ್ದು ಬಡಪಾಯಿ ಜೀವ

ಉಪ್ಪಿಟ್ಟಲ್ಲಿ ಗಂಡನ ತಿಥಿ ಮಾಡಲು ಪತ್ನಿ ಸಂಚು ; ಸತ್ತಿದ್ದು ಬೆಕ್ಕು, ನಾಯಿ- ಬದುಕಿದ್ದು ಬಡಪಾಯಿ ಜೀವ

ಸವದತ್ತಿ : ಕಟ್ಟಿಕೊಂಡ ಗಂಡನನ್ನು ಕೊಂದು ಆತನ ಆಸ್ತಿ ಹೊಡೆಯುವ ದುರುದ್ದೇಶದಿಂದ ಬೆಳಗಿನ ಉಪಹಾರ ಉಪ್ಪಿಟ್ಟಿನಲ್ಲಿ ವಿಷ ಬೆರಸಿ ಗಂಡನಿಗೆ ತಿನ್ನಿಸಿದ ಘಟನೆ ಸವದತ್ತಿ ತಾಲೂಕಿನ ಗೋರಾಬಾಳ ಗ್ರಾಮದಲ್ಲಿ ನಡೆದಿದೆ. 

ಪತ್ನಿ ಸಾವಕ್ಕ ಲಿಂಗಪ್ಪ ಹಮಾನಿ ( 32 ) ತನ್ನ ಗಂಡನಿಗೆ ವಿಷಹಾರ ತಿನಿಸಿರುವ ಆರೋಪಿ. ವಿಷ ಸೇವಿಸಿದ್ದ ಗೋರಬಾಳ ಗ್ರಾಮದ ನಿಂಗಪ್ಪ ಫಕೀರಪ್ಪ ಹಮಾನಿ ಸ್ಥಿತಿ ಚಿಂತಾಜನಕವಾಗಿದ್ದು ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆ ವಿವಿರ : ಕಳೆದ ಅಗಸ್ಟ್ 11 ರಂದು ಬೆಳಗಿನ ಜಾವ ಸಾವಕ್ಕ ಎಂಬುವವಳು ತನ್ನ ಗಂಡನಾದ ನಿಂಗಪ್ಪ ಎಂಬುವವನಿಗೆ ಉಪಹಾರ ಮಾಡಿ ಕೊಟ್ಟಿದ್ದಾಳೆ. ಉಪ್ಪಿಟ್ಟು ಸೇವಿಸಿದ್ದ ಕೆಲವೇ ಕ್ಷಣಗಳಲ್ಲಿ ನಿಂಗಪ್ಪ ನಿಶಕ್ತನಾಗಿದ್ದು ಆತನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇನ್ನೂ ಈ ಘಟನೆ ಯಾರ ಗಮನಕ್ಕೂ ಬರದಂತೆ ಆರೋಪಿತಳಾದ ಸಾವಕ್ಕ ಉಳಿದ್ದ ಉಪ್ಪಿಟ್ಟನ್ನು ಮನೆಯ ಪಕ್ಕದಲ್ಲಿರುವ ತಿಪ್ಪೆಗೆ ಎಸೆಯುತ್ತಾಳೆ. ನಂತರ ಈ ಉಪ್ಪಿಟ್ಟನ್ನು ತಿಂದ ಬೆಕ್ಕು ಹಾಗೂ, ನಾಯಿ ಸಾವಣಪ್ಪಿವೆ. ಇದರಿಂದ ಅನುಮಾನಗೊಂಡ ಈಕೆಯ ಮಾವ ಫಕೀರಪ್ಪ ಪೊಲೀಸ್ ಠಾಣೆಗೆ ದೂರು ದಾಖಲಿಸುತ್ತಾನೆ‌.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಉಪಹಾರದಲ್ಲಿ ವಿಷ ಸೇರಿಸಿ ಗಂಡನಿಗೆ ಹಾಕಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಸಹೋದರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!