ರೈತರ ಪಂಪಸೆಟ್ ಕಳ್ಳತನ ; ಪೊಲೀಸರಿಂದ ನಾಲ್ವರ ಬಂಧನ
ಗೋಕಾಕ್ : ರೈತರ ತೋಟಗಳಲ್ಲಿ ನೀರು ಮೇಲೆತ್ತಲು ಅಳವಡಿಸಿದ್ದ ಪಂಪ ಸೆಟ್ ಕಳ್ಳತನ ಮಾಡಿ ಸಾಗಿಸುತ್ತಿದ್ದ ನಾಲ್ವರನ್ನು ಗೋಕಾಕ್ ತಾಲೂಕಿನ ಕುಲಗೋಡ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 2 ಲಕ್ಷ ಮೌಲ್ಯದ ಪಂಪಸೆಟ್ ಹಾಗೂ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಬಂಧಿತರಾದವರು. ಕುಮಾರ ಕಂಬಾರ, ಮಲ್ಲಪ್ಪ ನಂದಿ, ರವಿ ಕಂಬಾರ, ಭೀಮಪ್ಪ ಹಣುಮಸಾಗರ ಇವರು ಗೋಕಾಕ್ ತಾಲೂಕಿನ ಕೈತನಾಳ ಗ್ರಾಮದವರಾಗಿದ್ದಾರೆ.
ಹಡಗಿನಾಳ ಗ್ರಾಮದ ರೈತ ಯಲ್ಲಪ್ಪ ಲಾಡಿ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಹಾಗೂ ಇತರ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ಜಿ.ಎಸ್ ಪಾಟೀಲ್ ನೇತೃತ್ವದ ತಂಡ ಕಾರ್ಯಾವರಣೆ ನಡೆಸಿತ್ತು.

ಪಂಪಸೆಟ್ ಕಳ್ಳತನ ಮಾಡಿದ ಹಳ್ಳಿಗಳು
1. ಸಜ್ಜಿಹಾಳ- 1
2. ವಡೇರಹಟ್ಟಿ- 2
3. ಖನಗಾಂವ- 1
4. ತವಗ- 1
5. ಬೆಣಚಿನಮರಡಿ- 1
6. ಗಿಳಿಹೊಸುರು- 1
7. ಕೈತನಾಳ- 2
8. ಕೇಶಪ್ಪನಹಟ್ಟಿ ಕಿನಾಲ್- 1
9. ಮೆಳವಂಕಿ- 1
10. ಹಡಗಿನಾಳ- 1
11. ಕೊಳವಿ ಕಿನಾಲ್- 1
12. ಮಿಡಕನಟ್ಟಿ- 1


