VIDEO – ಹೆಬ್ಬಾಳ್ಕರ್ ಬೆನ್ನುತಟ್ಟಿದ ಸಿಎಂ ಸಿದ್ದರಾಮಯ್ಯ ; ಮಿನಿಸ್ಟರ್ ಮೇಡಂ ರಿಯಾಕ್ಷನ್ ಹೇಗಿತ್ತು..!
ಅಥಣಿ : ಪಟ್ಟಣದ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಗೃಹಲಕ್ಷ್ಮೀ ಯೋಜನೆ ಕುರಿತು ಮಾತನಾಡುವ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆನ್ನುತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೌದು ಗೃಹಲಕ್ಷ್ಮೀ ಯೋಜನೆ ಇದೇ ತಿಂಗಳು ಬೆಳಗಾವಿಯಲ್ಲಿ ಅದ್ದೂರಿಯಾಗಿ ಉದ್ಘಾಟಿಸಲಾಗುತ್ತಿದ್ದು ಭರ್ಜರಿ ಸಿದ್ದತೆ ನಡೆಯುತ್ತಿದೆ. ಹಾಗೆಯೇ ಇಂತಹ ದೊಡ್ಡ ಯೋಜನೆಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಸಚಿವೆ ಹೆಬ್ಬಾಳ್ಕರ್ ಮೇಲೆ ಸಿಎಂ ಸಿದ್ದರಾಮಯ್ಯ ವಿಶೇಷ ಅಭಿಮಾನ ಹೊಂದಿರುವುದು ಸ್ಪಷ್ಟ.
ಕೋಟ್ಯಾಂತರ ಹಣ ಮಹಿಳೆಯರಿಗೆ ತಲುಪಿಸುವ ಮಹತ್ವದ ಯೋಜನೆ ಇದಾಗಿದ್ದು, ಎಲ್ಲಿಯೂ ವಿರೋಧ ಪಕ್ಷದವರಿಗೆ ಆಹಾರ ಆಗದ ರೀತಿಯಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಮಾಡಬೇಕಾದ ಸವಾಲು ಸಚಿವೆ ಹೆಬ್ಬಾಳ್ಕರ್ ಹಾಗೂ ಕಾಂಗ್ರೆಸ್ ಸರ್ಕಾರದ ಮೇಲಿದೆ. ಈ ಎಲ್ಲಾ ಕಾರಣಕ್ಕೆ ಹೆಬ್ಬಾಳ್ಕರ್ ಅವರಿಗೆ ಸಿಎಂ ಬಲ ತುಂಬುವ ಕೆಲಸ ಮಾಡುತ್ತಿದ್ದಾರೆ.


