ನಾಲ್ವರು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ; ಹೆಂಡತಿ ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ….?
ಬೆಂಗಳೂರು : ಒಂದೇ ಕುಟುಂಬದ ನಾಲ್ವರು, ಗಂಡ ಹೆಂಡತಿ ಹಾಗೂ ಇಬ್ಬರು ಮಕ್ಕಳ ಸಾವಿನ ಪ್ರಕರಣ ಗುರುವಾರ ಬೆಳಕಿಗೆ ಬಂದಿತ್ತು. ಆದರೆ ಪೊಲೀಸರು ಕೊಟ್ಟ ಪ್ರಾಥಮಿಕ ಮಾಹಿತಿ ಪ್ರಕಾರ ಈ ಪ್ರಕರಣದ ಹಿಂದೆ ರೋಚಕ ಟ್ವಿಸ್ಟ್ ಕೂಡಾ ಇದೆ.
ಹೌದು ಆಂಧ್ರಪ್ರದೇಶದ ಮೂಲದ ಸಾಫ್ಟವೇರ್ ಉದ್ಯೋಗಿ ವಿಜಯ್ ಹಾಗೂ ಹೇಮಾವತಿ ದಂಪತಿ ಕಳೆದ ಆರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಕಾಡುಗೋಡಿಯ ಸಾಯಿ ಗಾರ್ಡನ್ ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದರು. ಆದರೆ ಗುರುವಾರ ಪಕ್ಕದ ಮನೆಯವರಿಗೆ ಅನುಮಾನ ಬಂದು ಮನೆ ಬಾಗಿಲು ಒಡೆದಾಗ ಮನೆಯಲ್ಲಿದ್ದ ನಾಲ್ವರು ಸಾವನ್ನಪ್ಪಿದರು.
ಹೆಂಡತಿ, ಗಂಡ ಹಾಗೂ ಎರಡು ಮಕ್ಕಳು ಶವವಾಗಿ ಬಿದ್ದಿರುವುದನ್ನು ನೋಡಿ ಬೆಂಗಳೂರು ಬೆಚ್ಚಿ ಬಿದ್ದಿತ್ತು. ಸಾವಿಗೆ ನಿಖರ ಕಾರಣ ಕೂಡ ತಿಳಿದಿರಲಿಲ್ಲ. ಕೌಟುಂಬಿಕ ಸಮಸ್ಯೆಯಿಂದ ಈ ರೀತಿಯ ಆತ್ಮಹತ್ಯೆ ನಿರ್ಧಾರಕ್ಕೆ ಕುಟುಂಬ ಬಂದಿದೆ ಎಂದೇ ಹೇಳಲಾಗಿತ್ತು. ಆದರೆ ಪ್ರಕರಣದ ದಿಕ್ಕು ಬದಲಾಗಿದ್ದು ಸಾಫ್ಟವೇರ್ ಉದ್ಯೋಗಿ ಕ್ರೌರ್ಯಕ್ಕೆ ಮೂರು ಜೀವಗಳು ಬಲಿಯಾಗಿದ್ದವಾ ಎಂಬ ಅನುಮಾನ ಮೂಡಿದೆ.
ಗಂಡನಿಂದಲೇ ಹೆಂಡತಿ ಕೊಲೆ : ಹೌದು ಸಧ್ಯ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ FSL ಅಧಿಕಾರಿಗಳು ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಭಯಾನಕ ಸತ್ಯ ಹೊರಬಿದ್ದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಮೊದಲು ಹೆಂಡತಿ ಕೊಲೆ ಆಗಿದ್ದಾಳೆ. ಅದಾದ ನಂತರ ಟೆಕ್ಕಿಯ ಎರಡೂ ಮಕ್ಕಳನ್ನು ಕೊಲೆ ಮಾಡಲಾಗಿದೆ. ಎರಡು ದಿನ ಹೆಂಡತಿ ಹಾಗೂ ಮಕ್ಕಳ ಶವದ ಜೊತೆ ದಿನಗಳೆದ ನಂತರ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಟೆಕ್ಕಿ ಹೆಂಡತಿ ಮೃತ ಶರೀರ ಕೊಳೆತಿದ್ದು ಸುಮಾರು ಮೂರು ದಿನಗಳ ಹಿಂದೆ ಪ್ರಾಣಬಿಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಅದಾದ ಒಂದು ದಿನದ ನಂತರ ಇಬ್ಬರು ಮಕ್ಕಳನ್ನು ಕುತ್ತಿಗೆ ಹಿಸುಕಿ ಸಾಯಿಸಲಾಗಿದೆ. ನಂತರ ಮೂರನೇ ದಿನ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಪ್ರಾಣ ಒಂದು ದಿನದ ಹಿಂದೇ ಹೋಗಿದೆ ಎಂದು ತಿಳಿದುಬಂದಿದೆ.
ಒಟ್ಟಾರೆಯಾಗಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪಾಪಿ ಪತಿಯಿಂದ ಹೆಂಡತಿ ಹಾಗೂ ಮಕ್ಕಳ ಪ್ರಾಣಕ್ಕೆ ಕುತ್ತು ಬಂದಿದೆಯಾ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕು ಅಷ್ಟೇ.


