Select Page

Advertisement

ಕೋಳಿಗುಡ್ಡ ಗ್ರಾಮ ಅಭಿವೃದ್ಧಿ ಹರಿಕಾರನಿಗೆ ಮತ್ತೊಮ್ಮೆ ಒಲಿದ ಅಧ್ಯಕ್ಷ ಸ್ಥಾನ 

ಕೋಳಿಗುಡ್ಡ ಗ್ರಾಮ ಅಭಿವೃದ್ಧಿ ಹರಿಕಾರನಿಗೆ ಮತ್ತೊಮ್ಮೆ ಒಲಿದ ಅಧ್ಯಕ್ಷ ಸ್ಥಾನ 

ಬೆಳಗಾವಿ : ರಾಯಬಾಗ ತಾಲೂಕಿನ ಕೋಳಿಗುಡ್ಡ ಎಂಬ ಪುಟ್ಟ ಗ್ರಾಮವನ್ನು ಅಭಿವೃದ್ಧಿ ಮಾಡಿ ಗಾಂಧಿ ಗ್ರಾಮ ಪುರಸ್ಕಾರ ತಂದುಕೊಟ್ಟಿದ್ದ, ಯಶಸ್ವಿ ಗ್ರಾಮ‌ ಪಂಚಾಯತಿ ಸದಸ್ಯ ಶರಣಗೌಡ ಪಾಟೀಲ್ ಅವರಿಗೆ ಮತ್ತೊಮ್ಮೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಒಲಿದಿದೆ.

ಈಗಾಗಲೇ ಕೋಳಿಗುಡ್ಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂ. ಅಭಿವೃದ್ಧಿ ಕಾಮಗಾರಿ ನಡೆದಿವೆ. ಪ್ರಮುಖವಾಗಿ ಗ್ರಾಮದ ಹೃದಯಭಾಗದಲ್ಲಿ ಪುಟ್ಟ ಗುಡ್ಡವನ್ನು ಅಭಿವೃದ್ಧಿಪಡಿಸಿ ಸಧ್ಯ ಸುಂದರ ಕಾಳಿವನ ನಿರ್ಮಾನ ಕಾರ್ಯ ನಡೆಯುತ್ತಿದ್ದು ಪ್ರವಾಸಿ ತಾಣವಾಗಿ ಮಾರ್ಪಾಡು ಹೊಂದುತ್ತಿದೆ. 

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉತ್ತಮ ಚರಂಡಿ ಹಾಗೂ ರಸ್ತೆ ನಿರ್ಮಾಣದಂತಹ ಪ್ರಮುಖ ಅಭಿವೃದ್ಧಿ ಕಾರ್ಯಗಳಾಗಿದ್ದು ಈ ಹಿಂದೆ ಅಧ್ಯಕ್ಷರಾಗಿದ್ದ ಶರಣಗೌಡ ಪಾಟೀಲ್ ಅವರ ಪರಿಶ್ರಮದಿಂದ ಈ ಕಾರ್ಯ ನಡೆದಿದ್ದವು. ಒಬ್ಬ ಉತ್ತಮ ಗ್ರಾಮ ಪಂಚಾಯತಿ ಅಧ್ಯಕ್ಷ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆದಿದ್ದು ಶರಣಗೌಡ ಪಾಟೀಲ್ ಅವರು ಅಧ್ಯಕ್ಷರಾಗಿ, ಮಂಜುಳಾ ಮಾದರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.‌ ಜೊತೆಗೆ ಶರಣಗೌಡ ಪಾಟೀಲ್ ಅವರು ಮತ್ತೊಮ್ಮೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾದ ಕಾರಣ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!