ಬಸ್ ಸೀಟಿಗಾಗಿ ಹೊಡೆದಾಡಿಕೊಂಡ ಮೈಸೂರು ಮಹಿಳೆಯರು : ನಾರಿ ಶಕ್ತಿ ಸ್ಪೋಟ
ಮೈಸೂರು : ಮೈಸೂರಿನಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುವ ನಗರ ಸಾರಿಗೆ ಬಸ್‌ನಲ್ಲಿ ಮಹಿಳೆಯರ ಗಲಾಟೆ ಮಾಡಿ ಕೊಂಡಿರುವ ದೃಶ್ಯ ಕಂಡುಬಂದಿದೆ. ಮಹಿಳೆಯರು ಸೀಟಿಗಾಗಿ ಕೈಕೈ ಮಿಲಾಯಿಸಿದ್ದಾರೆ. ಬಸ್‌ನೊಳಗೆ ಕಿತ್ತಾಡಿಕೊಂಡ ವೀಡಿಯೋ ಸದ್ಯ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಸರ್ಕಾರದ ಪ್ರಮುಖ ಗ್ಯಾರಂಟಿಯಾದ ಶಕ್ತಿ ಯೋಜನೆ ಜಾರಿಯಾದ ದಿನದಿಂದಲೇ ಮಹಿಳೆಯರು ನಾ ಮುಂದು ತಾ ಮುಂದು ಅಂತಾ ಬಸ್ ಗಳಲ್ಲಿ ನುಗ್ಗುತ್ತಿದ್ದಾರೆ. ಬಸ್ ನ ಕಿಟಿಕಿಗಳು,ಬಾಗಿಲುಗಳು ಸಹ ಪೀಸ್ ಪೀಸ್ ಆಗ್ತಿವೆ. ದೇವಸ್ಥಾನಗಳಂತೂ ಪುಲ್ ರೇಶ್ ಆಗುತ್ತಿದ್ದು, ಅವಾಂತರಗಳು ಮುಂದುವರಿದಿವೆ.
ಕಾಂಗ್ರೆಸ್ ಮೊದಲ ಗ್ಯಾರಂಟಿ ಶಕ್ತಿ ಯೋಜನೆಯಿಂದ ಅನೇಕ ಸಮಸ್ಯೆಗಳು ಕಾಣುತ್ತಿವೆ. ಪ್ರಮುಖವಾಗಿ ಮಹಿಳೆಯರು ಪ್ರವಾಹದ ರೂಪದಲ್ಲಿ ಮನೆಯಿಂದ ಹೊರಬಂದು ಬಸ್ ಸಂಚಾರ ಮಾಡುತ್ತಿದ್ದು, ಇದರಿಂದ ಪ್ರಯಾಣದಲ್ಲಿ ತೀರಾ ವ್ಯತ್ಯಯ ಕಾಣಿಸುತ್ತಿದೆ. ಗಂಡಸರು ಹಾಗೂ ಶಾಲಾ ಮಕ್ಕಳು ಬಸ್ ಸಂಚಾರ ಮಾಡಲು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉಚಿತ ಬಸ್ ಪ್ರಯಾಣದಲ್ಲಿ ಮಹಿಳೆಯರು ಪ್ರವಾಹದ ರೂಪದಲ್ಲಿ ಬರುತ್ತಿದ್ದು ಇದನ್ನು ತಡೆಗಟ್ಟಲು ಸರ್ಕಾರ ಕೆಲ ಹೊಸ ನಿಯಮ ಸೇರಿಸಲು ಮಂದಾಗಿದೆ. ಇದರ ಪ್ರಕಾರ ಬುಕಿಂಗ್ ವ್ಯವಸ್ಥೆ ಪ್ರಾರಂಭಿಸುವ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ನಿಮಯ ಜಾರಿಗೆ ಮಾಡಿ ನಿಯಂತ್ರಣ ಹಾಕುವ ಉದ್ದೇಶ ಕೂಡಾ ಇದೆ.
ಇನ್ನೂ ಕೆಲ ಬಸ್ ಗಳಿಗೆ ಮಾತ್ರ ಉಚಿತ ಪ್ರಯಾಣದ ಭಾಗ್ಯ ನೀಡುವ ಲಕ್ಷಣ ಗೋಚರಿಸುತ್ತಿದೆ. ಪ್ರತಿದಿನ ಲಕ್ಷಾಂತರ ಹಣದ ನಷ್ಟ ಅನುಭವಿಸುತ್ತಿರುವ ಸಾರಿಗೆ ಇಲಾಖೆಗೆ ಸಧ್ಯ ಗ್ಯಾರಂಟಿ ಗೊಂದಲದಿಂದ ಮತ್ತಷ್ಟು ಸಂಕಷ್ಟ ನೀಡುತ್ತಿರುವುದು ಸ್ಪಷ್ಟ.


