11 ತಿಂಗಳು ಮಗುವನ್ನು ಬಿಟ್ಟು ಫ್ರೀ ಬಸ್ ಹತ್ತಿ ಪ್ರಿಯಕರನ ಭೇಟಿಗೆ ಹೋದ ಮಹಿಳೆ – 300 ಕಿ.ಮೀ. ಉಚಿತ ಪ್ರಯಾಣ
ಪುತ್ತೂರು : ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಶಕ್ತಿ ಯೋಜನೆ ಸಧ್ಯ ಕೆಲ ಮಹಿಳೆಯರು ಅನವಶ್ಯಕ ಕೆಲಸಕ್ಕೆ ಉಪಯೋಗ ಮಾಡಿಕೊಳ್ಳುತ್ತಿದ್ದು, ಮದುವೆಯಾದ ಯುವತಿಯೊಬ್ಬಳು ತನ್ನ ಹನ್ನೊಂದು ತಿಂಗಳು ಮಗುವನ್ನು ಬಿಟ್ಟು ದೂರದ ಪ್ರಿಯಕರನನ್ನು ಭೇಟಿಯಾಗಲು ಸುಮಾರು 300 ಕಿ. ಮೀಟರ್ ಸಂಚರಿಸಿದ ಘಟನೆ ಬೆಳಕಿಗೆ ಬಂದಿದೆ.
ಹೌದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಹುಬ್ಬಳ್ಳಿ ಮೂಲದ ವಿವಾಹಿತ ಯುವತಿ ಪ್ರೀತಿಸುತ್ತಿದ್ದಳು. ಆತ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದಲ್ಲಿ ತೋಟದ ಕೆಲಸ ಮಾಡುತ್ತಿದ್ದ. ಇವನ್ನು ಭೇಟಿಯಾಗಲು ಈ ಮಹಿಳೆ ತನ್ನ 11 ತಿಂಗಳು ಮಗುವನ್ನು ಬಿಟ್ಟು ಸುಮಾರು 300 ಕಿ.ಮೀಟರ್ ಬಸ್ ಪ್ರಯಾಣ ಮಾಡಿದ್ದು ಶಕ್ತಿ ಯೋಜನೆ ಲಾಭವನ್ನು ಬರಪೂರ ಪಡೆದುಕೊಂಡಿದ್ದಾಳೆ.
ಇನ್ನೂ ಮಹಿಳೆ ಯುವಕನನ್ನು ಪ್ರೀತಿಸುವ ಸುದ್ದಿ ಮನೆಯವರಿಗೂ ತಿಳಿದಿದತ್ತು. ಹಾಗಾಗಿ ವಿವಾಹಿತ ಮಹಿಳೆಯನ್ನು ಹುಡುಕಿಕೊಂಡು ಕುಟುಂಬದವರು ಪುತ್ತೂರಿಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ. ನಂತರ ಗ್ರಾಮದಲ್ಲಿ ಹುಡುಕಾಟ ನಡೆಸಿದರು ಈ ಇಬ್ಬರು ಸಿಕ್ಕಿಲ್ಲ.
ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಮಧ್ಯರಾತ್ರಿ ಹುಡುಕಾಟ ನಡೆಸಿದರು ಈ ಇಬ್ಬರು ಪರಾರಿಯಾಗಿದ್ದಾರೆ. ಈ ಕುರಿತು ಪುತ್ತೂರು ಪೊಲೀಸರು ಇಬ್ಬರ ಹುಡುಕಾಟ ಮುಂದುವರಿಸಿದ್ದಾರೆ.


