Select Page

Advertisement

ಬೆಳಗಾವಿ – ಮತದಾನ ಮಾಡಲು ಬಂದ ಅಜ್ಜಿ ಸಾವು

ಬೆಳಗಾವಿ – ಮತದಾನ ಮಾಡಲು ಬಂದ ಅಜ್ಜಿ ಸಾವು

ಯರಗಟ್ಟಿ: ವಿಧಾನಸಭಾ ಚುನವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತದಾನ ಚುರುಕುಗೊಂಡಿದ್ದು, ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಯರಝರ್ವಿಯಲ್ಲಿ ಮತದಾನಕ್ಕೆಂದು ಬಂದ ವೃದ್ಧೆಯೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸವದತ್ತಿ ಯಲ್ಲಮ್ಮ ಕ್ಷೇತ್ರ ವ್ಯಾಪ್ತಿಯ ಯರಝರ್ವಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಪಾರವ್ವ ಸಿದ್ನಾಳ (68) ಮೃತ ಮಹಿಳೆ.

ಮತಚಲಾಯಿಸಲು ಮತದಾರರ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಪಾರವ್ವ ಈಶ್ವರಪ್ಪ ಸಿದ್ನಾಳ ಅವರು ಲೋ ಬಿಪಿಯಿಂದಾಗಿ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!