ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನಾ ಮಸೂದೆ ಅಂಗೀಕಾರಕ್ಕೆ ಒಂದು ಹೆಜ್ಜೆ ಮಾತ್ರ ಬಾಕಿ ಇದ್ದು ಈ ಮಧ್ಯೆ ಕರ್ನಾಟಕಕ್ಕೆ ಹೊಸದಾಗಿ ಎಷ್ಟು ಲೋಕಸಭಾ ಕ್ಷೇತ್ರ ಸಿಗಲಿವೆ ಎಂಬ ಲೆಕ್ಕಾಚಾರ ಜೋರಾಗಿದೆ.

ಹೌದು ಸಧ್ಯ ದೇಶದಾದ್ಯಂತ ಒಟ್ಟು 543 ಕ್ಷೇತ್ರ ಇದ್ದು ಕ್ಷೇತ್ರ ಪುನರ್ ವಿಂಗಡನೆ ನಂತರ ಇದರ ಸಂಖ್ಯೆ 816 ಕ್ಕೆ ಏರಿಕೆಯಾಗಲಿದೆ. 24 ವರ್ಷಗಳ ನಂತರ ಈ ಕಾರ್ಯ ನಡೆಯುತ್ತಿದ್ದು ಈ ಹಿಂದೆ ಪುನರ್ ವಿಂಗಡನೆ ವಾಜಪೇಯಿ ಅಧಿಕಾರಾವಧಿಯಲ್ಲಿ ನಡೆದಿತ್ತು.

ಹೊಸದಾಗಿ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 42 ಕ್ಕೆ ಏರಿಕೆ ಆಗಲಿದ್ದು, ಈಹ ಲೋಕಸಭಾ ಕ್ಷೇತ್ರಗಳ ಸಂಖ್ಯೆ28 ಇವೆ. ಹೊಸ ಲೋಕಸಭಾ ಕ್ಷೇತ್ರ ಆದರೆ ಬೆಳಗಾವಿಗೆ ಎರಡು ಸ್ಥಾನ ಸಿಗುವ ಸಾಧ್ಯತೆ ಇದೆ.

ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರ ಇವೆ. ಈ ನಡುವೆ ಹೊಸದಾಗಿ ಗೋಕಾಕ್ ಹಾಗೂ ಅಥಣಿ ಲೋಕಸಭಾ ಕ್ಷೇತ್ರವಾಗಲಿದೆ ಎಂದು ಹೇಳಲಾಗುತ್ತಿದೆ.

ಜನಸಂಖ್ಯೆ ಆಧಾರದ ಮೇಲೆ ಎರಡೂ ಲೋಕಸಭಾ ಕ್ಷೇತ್ರಗಳು ಹುಟ್ಟಿಕೊಳ್ಳುತ್ತವೆ ಎಂಬ ವಾದ ಇದ್ದು, ಕೇಂದ್ರದಿಂದ ಅಧಿಕೃತ ಮಾಹಿತಿ ‌ಹೊರಬಂದಾಗ ಮಾತ್ರ ಇದನ್ನು ಖಚಿತವಾಗಿ ‌ಹೇಳಬಹುದಾಗಿದೆ.