ಬೆಳಗಾವಿ : ಬಸವ ಮಂಟಪ ಪುಸ್ತಕ ಬರೆದಿರುವ ರವಿ ಹಂಜ್ ಅವರ ಕೊಲೆ ಮಾಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಅಥಣಿ ಲಿಂಗಾಯತ ಮುಖಂಡನೋರ್ವ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.
ಅಥಣಿ ಪಟ್ಟಣದ ಲಿಂಗಾಯತ ಸಮುದಾಯದ ಮುಖಂಡ
ಪ್ರಕಾಶ್ ಮಹಾಜನ್ ಎಂಬಾತ ಬಸವ ಮಂಟಪ ಪುಸ್ತಕ ಬರೆದ ರವಿ ಹಂಜ್ ಅವರನ್ನು ಕೊಲೆ ಮಾಡಿದವರಿಗೆ 5 ಲಕ್ಷ ರೂ ನೀಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.
ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಲಿಂಗಾಯತ ಮುಖಂಡ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.





