ಮೈಸೂರು : ಕಬ್ಬಿನ ಬೆಲೆ‌ ಏರಿಕೆ ಆಗ್ರಹಿಸಿ ನಡೆದ ಬೆಳಗಾವಿ ರೈತರ ಭಾರಿ ಹೋರಾಟ ಯಶಸ್ವಿಯಾಗುವ ಹಂತದಲ್ಲಿತ್ತು, ಆದರೆ ರಾಜಕೀಯ ಕೈವಾಡ ಹಾಗೂ ಕುತಂತ್ರದಿಂದ ಎಲ್ಲವೂ ವಿಫಲವಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಸಕ್ಕರೆ ಕಾರ್ಖಾನೆ ಮಾಲಿಕರಾಗಿರುವ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಮೋಸದ ದರ ನಿಗದಿಪಡಿಸಿದ್ದಾರೆ. ಚಳುವಳಿ ದಿಕ್ಕು ತಪ್ಪಿಸಲು ಕುತಂತ್ರದಿಂದ ರೈತ ದ್ರೋಹದ ಕಾರ್ಯ ಎಸಗಿದ್ದು ಒಡೆದಾಳುವ ನೀತಿ ವಿರುದ್ಧ ಸುಮ್ಮನಿರಲು ಸಾಧ್ಯವಿಲ್ಲ ಎಂದರು.

ಬೆಳಗಾವಿಯ ಕೆಲ ಕಾರ್ಖಾನೆಗಳು 4 ಸಾವಿರ ರೂ. ಬಿಲ್ ಘೋಷಣೆ ಮಾಡಿವೆ. ಆದರೆ ಸತೀಶ್ ಜಾರಕಿಹೊಳಿ 3600 ಘೋಷಣೆ ಮಾಡಿದ್ದು ಮೋಸವಲ್ಲವೇ? ಬರುವ ನ.20 ರ ಒಳಗಾಗಿ ಬೇರೆ ಜಿಲ್ಲೆಗಳಿಗೂ ದರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.