ಬೆಳಗಾವಿ : ಇತಿಹಾಸ ಪ್ರಸಿದ್ಧ, ನಾಗನೂರು ಶ್ರೀ ರುದ್ರಾಕ್ಷಿ ಮಠದಿಂದ ನೀಡಲಾಗುವ “ಕನ್ನಡ ನುಡಿಶ್ರೀ” ಪ್ರಶಸ್ತಿಗೆ ಈ ವರ್ಷ ಸುವರ್ಣ ಸುದ್ದಿವಾಹಿನಿಯ ವರದಿಗಾರ ಅನಿಲ ಕಾಜಗಾರ ಅವರು ಭಾಜನರಾಗಿದ್ದಾರೆ.
ಪರಮ ಪೂಜ್ಯ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮೀಜಿ ಅವರ 137ನೇ ಜಯಂತ್ಯುತ್ಸವದ ಸಂದರ್ಭದಲ್ಲಿ, ಈ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಡಿಸೆಂಬರ್ 6ರಂದು ಸಂಜೆ 6 ಗಂಟೆಗೆ ನಡೆಯಲಿದೆ.
ಉತ್ತರ ಕರ್ನಾಟಕದಲ್ಲಿ ರುದ್ರಾಕ್ಷಿ ಮಠ- ದಕ್ಷಿಣ ಕರ್ನಾಟಕದಲ್ಲಿ ಸಿದ್ಧಗಂಗಾ ಮಠ ಎಂಬ ಮಾತು ಯುಗಗಳಿಂದಲೂ ಜನಜನಿತ. ಬೆಳಗಾವಿಯಲ್ಲಿ ಇಂದು ಕನ್ನಡಮಯ ವಾತಾವರಣ ಬೆಳೆಯಲು ಮತ್ತು ಬೆಳಗಾವಿ ಕರ್ನಾಟಕದಲ್ಲೇ ಉಳಿಯಲು ಈ ಮಠದ ಕಾಣಿಕೆ ಹೇಳಲಸದಳ. ಇಂಥ ಕನ್ನಡದ ಕುಲನೆಲದ ಪ್ರಶಸ್ತಿಯನ್ನು ಈ ಹಿಂದೆ ಅನೇಕ ಹಿರಿಯರು ಪಡೆದಿದ್ದಾರೆ. ಈ ಬಾರಿ ಅನಿಲ ಅವರಿಗೆ ಸಿಕ್ಕಿದ್ದು ವೃತ್ತಿಧರ್ಮಕ್ಕೆ ಸಿಕ್ಕ ಗೌರವವಾಗಿದೆ.





