ಬೆಳಗಾವಿ : ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 3,600 ರು. ಕೊಡಲು ಒಪ್ಪಿಕೊಂಡಿದ್ದು ರೈತರು ತಮ್ಮ ಹೋರಾಟ ಕೈಬಿಟ್ಟು ಕಾರ್ಖಾನೆ ಪ್ರಾರಂಭಿಸಲು ಅನುವು ಮಾಡಿಕೊಡಬೇಕು ಎಂದು ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಸಭೆ ನಂತರ ಮಾತನಾಡಿದ ಇವರು, ಸುದೀರ್ಘವಾಗಿ ಸಕ್ಕರೆ ಕಾರ್ಖಾನೆಗಳು ಹಾಗೂ ರೈತರ ಜೊತೆ ಸಭೆ ನಡಿಸಿ 3,600 ರು. ದರ ನಿಗದಿ ಮಾಡಲಾಗಿದೆ. ರೈತರು ಈ ಬೆಲೆಯನ್ನು ಒಪ್ಪಿಕೊಂಡು ಕಾರ್ಖಾನೆ ಪ್ರಾರಂಭಕ್ಕೆ ಅವಕಾಶ ನೀಡಬೇಕು ಎಂದರು.
ಸರ್ಕಾರದಿಂದ ಕೇಳಿರುವ ಪ್ರೋತ್ಸಾಹ ಬೆಲೆ ಹಾಗೂ ಕೇಂದ್ರದಿಂದ ಸಕ್ಕರೆ ಮೇಲಿನ ಎಂಎಸ್ ಪಿ ದರ ಹೆಚ್ಚಳದ ಬೇಡಿಕೆ ಇಟ್ಟಿದ್ದು ಇದು ಮುಂದುವರಿಯಲಿ, ಸಧ್ಯ ಸಕ್ಕರೆ ಕಾರ್ಖಾನೆಗಳು 3,600 ರೂ. ಕೊಡಲು ನಿರ್ಧರಿಸಿದ್ದು ಇದರಂತೆ ನಾಳೆಯಿಂದ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಂತೆ ಮನವಿ ಮಾಡಿದರು.
***********
3,650 ರೂ ಕೊಡುವಂತೆ ರೈತರ ಪಟ್ಟು :
ಸಚಿವ ಸತೀಶ್ ಜಾರಕಿಹೊಳಿ 3,600 ರು. ದರ ಘೋಷಣೆ ಮಾಡಿದ್ದು ಇದಕ್ಕೆ ರೈತ ಸಂಘಟನೆ ಮುಖಂಡರು ಬೆಂಬಲ ಸೂಚಿಸಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈತ ಸಂಘಟನೆ ರಾಜ್ಯಧ್ಯಕ್ಷ ಚೂನಪ್ಪ ಪೂಜೇರಿ, ಪ್ರತಿ ಟನ್ ಕಬ್ಬಿಗೆ 3650 ರು. ಘೋಷಣೆ ಮಾಡಬೇಕು ಜೊತೆಗೆ ಸಕ್ಕರೆ ಬೆಲೆ ಅನುಗುಣವಾಗಿ ಎರಡನೇ ಬಿಲ್ ನೀಡಲು ಒಪ್ಪಂದ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.




