ಅಥಣಿ : ಕಾಂಗ್ರೆಸ್ ಪಕ್ಷದಿಂದ ನಡೆಸಲು ಉದ್ದೇಶಿಸಿರುವ ವೋಟ್ ಬಚೋವೋ, ದೇಶ ಬಚಾವೋ ಪ್ರತಿಭಟನಾ ಆಂದೋಲನ ಕುರಿತು ಕಾಗವಾಡ ಮತಕ್ಷೇತ್ರದ ಉಸ್ತುವಾರಿ ಗಜಾನನ ಮಂಗಸೂಳಿ ಅವರು ಶಾಸಕ ರಾಜು ಕಾಗೆ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಬುಧವಾರ ಕಾಗವಾಡ ಶಾಸಕ ರಾಜು ಕಾಗೆ ಅವರ ನಿವಾಸಕ್ಕೆ ಭೇಟಿನೀಡಿದ ಇವರು ಎಸ್ಐಆರ್ ಪ್ರಕ್ರಿಯೆಯಲ್ಲಿ ಉಂಟಾದ ಗೊಂದಲ ಹಾಗೂ ಮತದಾರರನ್ನು ತಗೆದು ಹಾಕಿರುವ ಕುರಿತು ವೋಟ್ ಬಚೋವೋ, ದೇಶ ಬಚಾವೋ ಆಂದೋಲನ ಕುರಿತು ಸಮಗ್ರವಾಗಿ ಚರ್ಚಿಸಿದರು.
ಈ ವೇಳೆ ಕಾಗವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ ಅಕ್ಕಿವಾಟೆ, ಅನಂತಪೂರ ಬ್ಲಾಕ್ ಅಧ್ಯಕ್ಷರಾದ ಒಂಪ್ರಕಾಶ ಪಾಟೀಲ, ಕೆಪಿಸಿಸಿ ಸದಸ್ಯರಾದ ಚಂದ್ರಕಾಂತ್ ಇಮ್ಮಡಿ , ಕೃಷ್ಣಾ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೋಡೆ ,ಶಾಸಕರ ಆಪ್ತ ಸಹಾಯಕ ಕುಮಾರ ಪಾಟೀಲ, ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ್ ಸಿಂಗೆ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.





