ಬೆಳಗಾವಿ : ಕಬ್ಬು ಬೆಳೆಗೆ ಹೆಚ್ಚುವರಿ ಬಿಲ್ ಘೋಷಣೆ ಮಾಡುವವರೆಗೂ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡದಂತೆ ರೈತ ಸಂಘಟನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಜೈಲ್ ಭರೋ ಆಂದೋಲನ ಆರಂಭಿಸಿರುವ ರೈತರ ಪಾದಯಾತ್ರೆ ಹುಕ್ಕೇರಿ ತಾಲೂಕಿನ ಹೊಳೆಮ್ಮ ದೇವಸ್ಥಾನ ತಲುಪಿದೆ. ಈ ಮಧ್ಯೆ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ಕೂಡಾ ನಡೆಸಲಾಗಿದೆ.

ಕೊನೆಯ ಯತ್ನ ಎಂಬಂತೆ ಮತ್ತೊಂದು ಸುತ್ತು ಸಕ್ಕರೆ ಕಾರ್ಖಾನೆಗಳ ಮಾಲಿಕರ ಜೊತೆ ಸಭೆ ನಡೆಸಿ ದರ ಘೋಷಣೆ ಮಾಡುವ ಸಾಧ್ಯತೆ ಇದ್ದು ಅಲ್ಲಿಯವರೆಗೆ ಕಾರ್ಖಾನೆ ಪ್ರಾರಂಭಿಸದಂತೆ ಚೂನಪ್ಪ ಮನವಿ ಮಾಡಿದ್ದಾರೆ.