ಬೆಳಗಾವಿ : ಕಳೆದ ಎರಡುವರೆ ವರ್ಷಗಳಿಂದ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಹಮ್ಮದ್ ರೋಷನ್ ಅವರ ವರ್ಗಾವಣೆ ಕಾಲ ಸನ್ನಿಹಿತ ಆಯಿತಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಹೌದು ಕಾರ್ಯಕ್ರಮ ಒಂದರಲ್ಲಿ ಜಿಲ್ಲಾಧಿಕಾರಿ ಮಾತನಾಡಿರುವ ಆ ಮಾತುಗಳು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿವೆ. ಪ್ರೀತಿಯ ಮಾತು ಹಾಗೂ ಉತ್ತಮ ಕಾರ್ಯದ ಮೂಲಕ ಜನಮನ್ನಣೆ ಪಡೆದಿರುವ ಡಿಸಿ ಆಡಿದ ವಿದಾಯದ ಮಾತು ಸಾಕಷ್ಟು ವೈರಲ್ ಆಗಿದೆ.
ನಾನು ಇಲ್ಲಿ ಇರಲಿ ಬಿಡಲಿ ಈ ಸಂಬಂಧವನ್ನು ಸದಾಕಾಲವೂ ನೆನಪಿಟ್ಟುಕೊಳ್ಳುತ್ತೇನೆ. ಇದು ಒಂದು ವಿದಾಯದ ಭಾಷಣದ ರೀತಿ ಆಗಿದೆ. ಸಮಯ ಬರುತ್ತದೆ ಆಗ ನಾವು ವರ್ಗಾವಣೆಗೆ ಸಜ್ಜಾಗಬೇಕು, ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳುವ ಮೂಲಕ ವರ್ಗಾವಣೆ ಸುಳಿವು ನೀಡಿದ್ದಾರೆ.





