ದಸರಾ ಹಬ್ಬದ ಆಯುಧ ಪೂಜೆ (Ayudha Pooja) ಹಿನ್ನಲೆ ವಾಹನ ಪೂಜೆ ಮಾಡುತ್ತಿದ್ದ ವೇಳೆ ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ ಸಾ*ವನ್ನಪ್ಪಿದ್ದಾನೆ. ಈ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು (Maddur) ತಾಲ್ಲೂಕಿನ ಯರಗನಹಳ್ಳಿಯಲ್ಲಿ ನಡೆದಿದೆ.

ಕಂದನ್ ಎಸ್.ಗೌಡ (3) ಮೃತ ಬಾಲಕ. ಆಯುಧ ಪೂಜೆ (Ayudha Pooja) ಹಿನ್ನಲೆ ವಾಹನ ಪೂಜೆ ಮಾಡುತ್ತಿದ್ದ ವೇಳೆ ಕಾರಿನ ಚಕ್ರಕ್ಕೆ ಸಿಲುಕಿ ಪ್ರಾ*ಣ ಕಳೆದುಕೊಂಡಿದ್ದಾನೆ.
ದಸರಾ ಹಬ್ಬದ ದಿನವಾದ ಇಂದು ಕುಟುಂಬಸ್ಥರಿಂದ ಆಯುಧ ಪೂಜೆ ಕಾರ್ಯ ನಡೆಯುತ್ತಿತ್ತು.

ಪೂಜೆ ಬಳಿಕ ಕಾರನ್ನು ಹೊರಗೆ ಕಡೆ ನಿಲ್ಲಿಸಲು ಮುಂದಾಗಿದ್ದರು. ಈ ವೇಳೆ ಸಂಪತ್, ಪುತ್ರ ಕಂದನ್ ಕಾರು ಹತ್ತಲು ಮುಂದಾಗಿದ್ದಾನೆ. ಆದನ್ನ ಗಮನಿಸದೇ ಸಂಪತ್ ಬಾವ ಸಂಜಯ್ ವಾಹನ ಚಲಾಯಿಸಿದ್ದಾನೆ. ಕಾರಿನ ಚಕ್ರಕ್ಕೆ ಸಿಲುಕಿದ ಬಾಲಕ ರ*ಕ್ತಸ್ರಾವವಾಗಿ ತೀವ್ರಗೊಂಡಿದ್ದಾನೆ.

ಮದ್ದೂರು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಬಾಲಕ‌ ಸಾವಣಪ್ಪಿದ್ದಾನೆ.‌ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.