ಬೆಳಗಾವಿ : ಚಿಕ್ಕೋಡಿ ಶೈಕ್ಷಣಿಕ‌ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಆಡಳಿತಾತ್ಮಕ ಸಮಸ್ಯೆ ಕುರಿತು ರಾಜ್ಯ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ‌ಜಿ.ಎಮ್ ಹಿರೇಮಠ ಅವರ ನಿಯೋಗ ರಾಜ್ಯ ಶಿಕ್ಷಣ ಇಲಾಖೆಗಳ ವಿವಿಧ ಹಂತದ ಅಧಿಕಾರಿಗಳನ್ನು ಭೇಟಿಯಾಗಿ ಪ್ರಾಥಮಿಕ ಶಾಲಾ ಶಿಕ್ಷಕರು ದಿನನಿತ್ಯ ಅನುಭವಿಸುತ್ತಿರುವ ತೊಂದರೆಗಳ ಕುರಿತು ಮನವಿ ಸಲ್ಲಿಸಿದರು.

ಹೆಚ್‌ಆರ್.ಎಮ್ಎಸ್ – ೧ ಹಾಗೂ ಹೆಚ್‌ಆರ್.ಎಮ್ಎಸ್ – ೨ ಎಸ್ಎಸ್ಕೆ ಸೇರಿದಂತೆ ವಿವಿಧ ಹಂತಗಳಲ್ಲಿ ‌ನೆನೆಗುದಿಗೆ ಬಿದ್ದಿರುವ ವೇತನ ಬಡ್ತಿ ಟೈಂ ಬಾಂಬ್ ನಲ್ಲಿ ಆಗುತ್ತಿರುವ ವೇತನ‌ ಕಡಿತ ಹಾಗೂ ಕೆಜಿಐಡಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ತಂಡ ಯಶಸ್ವಿಯಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಿ, ಎನ್.ಜಿ.ಒ‌ ನಿರ್ದೇಶಕರಾದ ಮಹಾಂತೇಶ್ ಘೋಳಪ್ಪನವರ, ಸಿದ್ರಾಮ ಲೋಕಣ್ಣವರ ಉಪಸ್ಥಿತರಿದ್ದರು.