ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಅಧಿಕಾರಿಗಳ ಬೌ..ಬೌ..ಆಟ ; ಗನ್ ಸಂಸ್ಕೃತಿ, ಹುಚ್ಚಾಟದ ಹೇಳಿಕೆ, ಲೋಕಾಯುಕ್ತರಿಂದ ಮಂಗಳಾರತಿ..! ಅಥಣಿಯಲ್ಲಿ ಹೆಣ್ಣು ನಾಯಿಗೆ ಅಪಮಾನ
ಬೆಳಗಾವಿ : ಡಿ.ಕೆ ಶಿವಕುಮಾರ್ ಸಂಪುಟದ ಪ್ರಭಾವಿ ಸಚಿವ ಹಾಗೂ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ತವರಲ್ಲಿ ಸಧ್ಯ ಬೌ..ಬೌ ಆಟ ಜೋರಾಗಿದೆ. ಅಧಿಕಾರಿಗಳೇ ಬೌ…ಬೌ ಎನ್ನುತ್ತಿದ್ದು ಸೌಮ್ಯ ಸಚಿವರ ತವರೂರು ನೋಡಿ ಜನ ನಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಸಧ್ಯ ಅಥಣಿ ತಾಲೂಕಿನಲ್ಲಿ ಬಹು ಚರ್ಚಿತ ವ್ಯಕ್ತಿ ಎಂದರೆ ಅಥಣಿ ಪುರಸಭೆ ಮುಖ್ಯಾಧಿಕಾರಿ. ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಬೌ..ಬೌ ಹೇಳಿಕೆಯಿಂದ ಸದ್ದು ಮಾಡುತ್ತಿದ್ದಾರೆ. ಇವರನ್ನು ನೋಡಿ ಜನ ಮುಸು…ಮುಸು ನಕ್ಕು..ಇದೇ ನಾ ಪ್ರಭಾವಿ ಸಚಿವರ ತವರೂರಿನ ಅಧಿಕಾರಿಗಳ ವರ್ತನೆ ಎಂದು ಆಡಿಕೊಳ್ಳುತ್ತಿದ್ದಾರೆ.
ಅಥಣಿಗೆ ಗನ್ ಸಂಸ್ಕೃತಿ ಪರಿಚಯಿಸಿದ ಅಧಿಕಾರಿ :
ಅಥಣಿ ಪುರಸಭೆ ಮುಖ್ಯಾಧಿಕಾರಿ ಕಳೆದ ಕೆಲ ವರ್ಷಗಳಿಂದ ವಿಚಿತ್ರ ವರ್ತನೆ ತೋರಿದ್ದಾರೆ. ದಶಕಗಳ ಇತಿಹಾಸ ಹೊಂದಿರುವ ಅಥಣಿ ಪಟ್ಟಣದಲ್ಲಿ ಮೊದಲಬಾರಿಗೆ ಒಬ್ಬ ಅಧಿಕಾರಿ ಗನ್ ಹಿಡಿದು ಕಚೇರಿ ಕೆಲಸಕ್ಕೆ ಬಂದಿದ್ದು ಶೋಚನೀಯ. ಅಧಿಕಾರಿ ವರ್ಗದವರನ್ನು ಅತ್ಯಂತ ಗೌರವಯುತವಾಗಿ ಕಾಣುತ್ತಿರುವ ಅಥಣಿ ಪಟ್ಟಣದಲ್ಲಿ ಇದೆಂತ ವಿಚಿತ್ರ ನಡೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು.
ಉಪ ಲೋಕಾಯುಕ್ತರಿಂದ ಮಂಗಳಾರತಿ : ಚಿಕ್ಕೋಡಿಯಲ್ಲಿ ಸಾರ್ವಜನಿಕವಾಗಿ ಉಪ ಲೋಕಾಯುಕ್ತರಿಂದ ಅಥಣಿ ಪುರಸಭೆ ಮುಖ್ಯಾಧಿಕಾರಿ ಮಂಗಳಾರತಿ ಮಾಡಿಸಿಕೊಂಡಿದ್ದರು. ನಗುವುದು ಬಿಟ್ಟರೆ ಈ ವ್ಯಕ್ತಿಗೆ ಏನೂ ಗೊತ್ತಿಲ್ಲ ಎಂದು ಉಪ ಲೋಕಾಯುಕ್ತರು ಗರಂ ಆಗಿದ್ದರು. ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಅಧಿಕಾರಿಯನ್ನು ಅಮಾನತು ಮಾಡಲು ಡಿಸಿಗೆ ಸೂಚನೆ ನೀಡಿದ್ದರು.
ಬೌ…ಬೌ ವೀಡಿಯೋ ವೈರಲ್ : ಪುರಸಭೆ ಮುಖ್ಯಾಧಿಕಾರಿ
ಅಶೋಕ್ ಗುಡಿಮನಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಾಹಿತಿ ಹಕ್ಕು ಅಡಿಯಲ್ಲಿ ಮುಖ್ಯಾಧಿಕಾರಿ ಕೆಲಸಗಳ ಮಾಹಿತಿ ಕೇಳುವ ವ್ಯಕ್ತಿಯೋರ್ವನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಹೆಣ್ಣು ನಾಯಿ, ಹಂದಿ, ಬೌ..ಬೌ ಪದಬಳಕೆ ಮಾಡುವ ಮೂಲಕ ಮುಖ್ಯಾಧಿಕಾರಿ ಸಾರ್ವಜನಿಕವಾಗಿ ನಗೆಪಾಟಲಿಗೆ ಈಡಾಗಿದ್ದಾರೆ.
ಕೆಲಸ ಕಮ್ಮಿ…..ರಾಜಕೀಯ ಜಾಸ್ತಿ : ಸಧ್ಯ ಪಟ್ಟಣದಲ್ಲಿ ಪುರಸಭೆ ಅಧಿಕಾರಿಯ ವಿಚಿತ್ರ ವರ್ತಣೆಯಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಅನವಶ್ಯಕ ಕಾರಣಕ್ಕೆ ಸುದ್ದಿಯಾಗುತ್ತಿರುವ ಅಧಿಕಾರಿ ಕೀಳು ಭಾಷೆ ಪ್ರಯೋಗಿಸುವ ಮೂಲಕ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಇದರಿಂದ ಸಚಿವ ಲಕ್ಷ್ಮಣ ಸವದಿ ಗೌರವಕ್ಕೂ ಚ್ಯುತಿ ಬರುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕೂಡಲೇ ಲಕ್ಷ್ಮಣ ಸವದಿ ಎಚ್ಚೆತ್ತುಕೊಂಡು ಅಧಿಕಾರಿಗಳಿಗೆ ಶಿಶ್ತಿನ ಪಾಠ ಮಾಡಿದರೆ ತಾಲೂಕಿನ ಗೌರವಕ್ಕೆ ಒಳ್ಳೆಯದು.




