ಬೆಳಗಾವಿ : ಅತ್ಯಂತ ಕಡಿಮೆ ಖರ್ಚಿನಲ್ಲಿ ಊಟ ಹಾಗೂ ವಸತಿ ಸೇರಿ ಉತ್ತರ ಭಾರತ, ದಕ್ಷಿಣ ಭಾರತ ಸೇರಿದಂತೆ 12 ಜ್ಯೋತಿರ್ಲಿಂಗಗಳ ದರ್ಶನ ಮಾಡುವ ಸದಾವಕಾಶವ ಕಲ್ಪಿಸಿದವರು ಶ್ರೀ ಮಲ್ಲಿಕಾರ್ಜುನ ಯಾತ್ರಾ ಕಂ, ಕರ್ಲಟ್ಟಿ.
ಹೌದು ಸುದೀರ್ಘ ಅವಧಿಯಿಂದ ಯಾತ್ರೆಗಳನ್ನು ಕೈಗೊಳ್ಳುವ ಮೂಲಕ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಸಾವಿರಾರು ಕಿ. ಮೀಟರ್ ದೂರದ ಪ್ರವಾಸ ಅನುಭವ ನೀಡುವ ಈ ವಿನೂತನ ಕಾರ್ಯಕ್ಕೆ ಶ್ರೀ ಮಲ್ಲಿಕಾರ್ಜುನ ಯಾತ್ರಾ ಕಂ. ಕರ್ಲಟ್ಟಿ ಹೆಸರುವಾಸಿಯಾಗಿದೆ.
ಯುವಕ ಕಲ್ಲಯ್ಯ ದುಂಡಯ್ಯ ಮಠಪತಿ ಇವರ ಪರಿಶ್ರಮದಿಂದ ಬೆಳೆದು ನಿಂತಿರುವ ಶ್ರೀ ಮಲ್ಲಿಕಾರ್ಜುನ ಯಾತ್ರಾ ಕಂ. ಕಳೆದ ಹಲವು ವರ್ಷಗಳಿಂದ ಜನರಿಗೆ ಸೇವೆ ನೀಡುತ್ತಾ ಬಂದಿದೆ. ಪ್ರಾಣಿಕರ ಸುರಕ್ಷತೆ ಹಾಗೂ ಆರೋಗ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಉತ್ತರ ಹಾಗೂ ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳ ಪ್ರವಾಸವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಮನೆ ಊಟ – ಉತ್ತಮ ವಸತಿ :
ಶ್ರೀ ಮಲ್ಲಿಕಾರ್ಜುನ ಯಾತ್ರಾ ಕಂ, ಕರ್ಲಟ್ಟಿ ಇವರು ಮನೆ ಊಟ ಹಾಗೂ ವ್ಯವಸ್ಥಿತ ವಸತಿಗೆ ಹೆಸರುವಾಸಿ. ಪ್ರವಾಸಕ್ಕೆ ತೆರಳಿದ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವಲ್ಲಿ ಎತ್ತಿದ ಕೈ. ಉತ್ತರ ಕರ್ನಾಟಕ ಶೈಲಿಯ ಮನೆ ಊಟವನ್ನೇ ಪ್ರವಾಸದಲ್ಲಿ ನೀಡುವ ಇವರು ಅತ್ಯಂತ ರುಚಿಕರ ಊಟ ನೀಡುತ್ತಾರೆ. ಇದರಿಂದ ಪ್ರವಾಸಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಪ್ರತಿದಿನವೂ ವಿಭಿನ್ನ ಊಟ ಹಾಗೂ ನಾಷ್ಟಾ ನೀಡುವ ಇವರು ಗುಣಮಟ್ಟದ ಅಹಾರಕ್ಕೆ ಹೆಚ್ಚು ಗಮನ ಕೊಡುತ್ತಾರೆ.
ಸೆಮಿ ಸ್ಲೀಪರ್ – ಪುಶ್ ಬ್ಯಾಕ್ ಬಸ್ ವ್ಯವಸ್ಥೆ – ಆರಾಮದಾಯಕ ಪ್ರವಾಸಕ್ಕೆ ಸಹಕಾರಿಯಾಗುವಂತೆ ಅತ್ಯಂತ ಉತ್ತಮ ಗುಣಮಟ್ಟದ ಐಶಾರಾಮಿ ಬಸ್ ವ್ಯವಸ್ಥೆಯನ್ನು ಯಾತ್ರಾ ಕಮಿಟಿ ಮಾಡುತ್ತದೆ. ಸೆಮಿ ಸ್ಲೀಪರ್ – ಪುಶ್ ಬ್ಯಾಕ್ ಬಸ್ ವ್ಯವಸ್ಥೆ ಇದ್ದು ಆರಾಮದಾಯಕವಾಗಿ ಪ್ರವಾಸ ಮಾಡಬಹುದಾಗಿದೆ. ಜೊತೆಗೆ ಮನರಂಜನೆಗಾಗಿ ಗುಣಮಟ್ಟದ ಸೌಂಡ್ ಹಾಗೂ ಟಿ.ವಿ ವ್ಯವಸ್ಥೆ ಇದೆ.
ವೈದ್ಯಕೀಯ ನೆರವು – ತ್ವರಿತ ಸಹಾಯ :
ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಪ್ರವಾಸಿಗರಿಗೆ ಅನಾರೋಗ್ಯ ಉಂಟಾದರೆ ಶ್ರೀ ಮಲ್ಲಿಕಾರ್ಜುನ ಯಾತ್ರಾ ಕಂ, ಕರ್ಲಟ್ಟಿ ತಂಡ ಕೂಡಲೇ ವೈದ್ಯಕೀಯ ಸಹಾಯ ನೀಡುತ್ತದೆ. ಆಯಾ ಪ್ರದೇಶಗಳ ವೈದ್ಯರ ಜೊತೆ ನಿರಂತರ ಸಂಪರ್ಕ ಇದ್ದು ತ್ವರಿತವಾಗಿ ವೈದ್ಯಕೀಯ ಸೌಲಭ್ಯ ಕೊಡುತ್ತಾರೆ. ಜೊತೆಗೆ ಪ್ರವಾಸದ ಮಧ್ಯದಲ್ಲಿ ಹೆಲ್ತ್ ಕ್ಯಾಂಪ್ ಸಹ ಮಾಡಿಸಲಾಗುತ್ತದೆ.
ಎಲ್ಲೆಲ್ಲಿ ಪ್ರವಾಸ : ಉತ್ತರ ಭಾರತದ ತುಳಜಾಪುರ ಅಂಬಾ ಭವಾನಿ, ಪಳಲಿ ವೈಜ್ಯನಾಥ, ನಾಗನಾಥ, ರಾಮಟೆಕ್, ಪ್ರಯಾಗರಾಜ, ಸಿತಾಮುಡಿ, ಕಾಶಿ, ಅಯೋಧ್ಯ, ಹರಿದ್ವಾರ, ದೆಹಲಿ, ಬೃಂದಾವನ, ಮಥುರಾ, ಆಗ್ರಾ, ಉಜ್ಜಯಿನಿ, ಖಾಂಡ್ವಾ, ಯಲ್ಲೋರಾ, ಶಿರಡಿ,ಗೌಥಮಿತಟೆ, ನಾಸಿಕ್, ದಾಖಿನಿ, ಮಿನಿ ಬಾಲಾಜಿ. ( ಇನ್ನೂ ಸ್ಥಳಗಳು ಹೆಚ್ಚಾಗುತ್ತವೆ)
ದಕ್ಷಿಣ ಭಾರತ – ಮಂತ್ರಾಲಯ, ಶ್ರೀಶೈಲ, ಮಹಾನಂದಿ, ತಿರುಪತಿ, ಕಂಚಿ, ಶಿವಕಂಚಿ ವಿಷ್ಣುಕಂಚಿ, ಚಿದಂಬರಂ, ವೈದೀಶ್ವರ, ಕುಂಬಕೋಣಂ, ತಂಜಾವರ, ಶ್ರೀರಂಗಂ, ರಾಮೇಶ್ವರ, ಮಧುರೈ, ಕನ್ಯಾಕುಮಾರಿ, ತಿರುವಂತಪುರ, ಕೊಚ್ಚಿ, ಅಜವಲ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಚಾಮರಾಜನಗರ, ನಂಜನಗೂಡು, ಮೈಸೂರು, ಹೊರನಾಡು, ಶ್ರಂಗೇರಿ, ಉಡುಪಿ, ಮುರುಡೇಶ್ವರ, ಗೋಕರ್ಣ. ಜೊತೆಗೆ ಈಶಾನ್ಯ ಭಾರತದ ಪ್ರವಾಸಗಳು ಲಭ್ಯ ಇವೆ.
ತಂದೆಯ ಹಾದಿಯಲ್ಲಿ ಪುತ್ರ ಕಲ್ಲಯ್ಯ :
ದಿ. ದುಂಡಯ್ಯ ಕಲ್ಲಯ್ಯ ಮಠಪತಿ ಇವರು ಪ್ರಾರಂಭಿಸಿದ ಶ್ರೀ ಮಲ್ಲಿಕಾರ್ಜುನ ಯಾತ್ರಾ ಕಮಿಟಿ ದಶಕಗಳಿಂದ ಉತ್ತಮ ಸೇವೆ ಕೊಡುತ್ತಾ ಬಂದಿದೆ. ಜನರನ್ನು ಸುರಕ್ಷಿತವಾಗಿ ಯಾತ್ರೆ ಮಾಡಿಸಿದ ಹೆಗ್ಗಳಿಕೆಗೆ ಮಠಪತಿ ಕುಟುಂಬ ಪಾತ್ರವಾಗಿದೆ. ಇವರ ಅಕಾಲಿಕ ನಿಧನದಿಂದ ಇವರ ಸುಪುತ್ರ ಕಲ್ಲಯ್ಯ ಮಠಪತಿ ಅತ್ಯಂತ ಯಶಸ್ವಿಯಾಗಿ ತಮ್ಮ ಕಾರ್ಯವನ್ನು ಮುನ್ನಡೆಸಿಕೊಂಡು ಸಾಗಿದ್ದಾರೆ.
——-ಸಂಪರ್ಕ ಮಾಡುವ ವಿಳಾಸ——-
ಕಲ್ಲಯ್ಯ ದುಂಡಯ್ಯ ಮಠಪತಿ ಸಾ – ಕರ್ಲಟ್ಟಿ
ಮೊಬೈಲ್ ಸಂಖ್ಯೆ : 8970065711, 9164769902
– ಶ್ರೀ ಮಲ್ಲಿಕಾರ್ಜುನ ಯಾತ್ರಾ ಕಂ, ಕರ್ಲಟ್ಟಿ



