ವಿಜಯನಗರ : ಜಿಲ್ಲೆಯ (Vijayanagara) ಹೊಸಪೇಟೆ ತಾಲೂಕಿನ ಅನಂತಯ್ಯನಗುಡಿ ಸಮೀಪ ಗಣೇಶ ಮೂರ್ತಿಯನ್ನು (Ganesha idol) ಪ್ರತಿಷ್ಠಾಪನೆಗಾಗಿ ಟ್ರ್ಯಾಕ್ಟರ್‌ನಲ್ಲಿ ಒಯ್ಯುತ್ತಿದ್ದಾಗ ಕಮಲಾಪುರ ಮುಖ್ಯ ರಸ್ತೆಯ ಬಳಿ ಮತ್ತೊಂದು ದಿಕ್ಕು ಎಂಬ ಯುವಕನಿಗೆ ವಿದ್ಯುತ್ ತಂತಿ ತಗಲಿ (Current shock) ದುರಂತ ಸಂಭವಿಸಿದೆ.

ಗಣೇಶ ವಿಗ್ರಹಕ್ಕೆ ಆಸರೆಯಾಗಿ ಕಟ್ಟಿದ್ದ ಬಿದಿರಿನ ಕೋಲು ಮೇಲಿದ್ದ ವಿದ್ಯುತ್ ಲೈನ್‌ಗೆ ಸ್ಪರ್ಶಿಸಿದ ಪರಿಣಾಮ, ವಾಹನದಲ್ಲಿದ್ದ ಯುವಕರಿಗೆ ತಕ್ಷಣ ವಿದ್ಯುತ್ ಆಘಾತ ಉಂಟಾಗಿದೆ. ಈ ವೇಳೆ ಆಘಾತದ ರಭಸಕ್ಕೆ ಗಣೇಶನ ಮೂರ್ತಿ ಹಾಗೂ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಕಾಲುವೆಗೆ ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಗಾಯಗೊಂಡಿರುವ ಇಬ್ಬರು ಯುವಕರನ್ನು ತಕ್ಷಣವೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಹವರ್ ಎನ್. ಹಾಗೂ ಡಿವೈಎಸ್ಪಿ ಮುರಳೀಧರ್ ಭೇಟ್ಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರಿಗೆ ಹಬ್ಬದ ಮೆರವಣಿಗೆ ವೇಳೆ ಹೈವೋಲ್ಟೇಜ್ ವಿದ್ಯುತ್ ತಂತಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.