ಬೆಳಗಾವಿ : ಗಣೇಶೋತ್ಸವ ಸಂದರ್ಭದಲ್ಲಿ ‌ಸಾರ್ವಜನಿಕರು ಹಾಗೆಯೇ ಗಣೇಶ ಮಂಡಳಗಳು ವಿದ್ಯುತ್ ಅವಘಡಗಳು ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸಬೇಕು, ಸುರಕ್ಷಿತವಾಗಿ ಹಬ್ಬ ಆಚರಣೆ ಮಾಡುವಂತೆ ಹೆಸ್ಕಾಂ ಅಥಣಿ ವಿಭಾಗದ
ಕಾರ್ಯಪಾಲಕ ಅಭಿಯಂತರ ಜಿ.ವ್ಹಿ ಸಂಪಣ್ಣವರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಸಾರ್ವಜನಿಕರಯ ಗಣೇಶೋತ್ಸವ ಸಂದರ್ಭದಲ್ಲಿ ಹೆಸ್ಕಾಂ ಹೊರಡಿಸಿರುವ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಬೇಕು. ಗಣೇಶ ಮೂರ್ತಿಗಳನ್ನು ತರುವ ವೇಳೆ ವಿದ್ಯುತ್ ತಂತಿಗಳತ್ತ ಗಮನ ಹರಿಸುವಂತೆ ತಿಳಿಸಿದ್ದಾರೆ.

ಗಣೇಶನ ಪೆಂಡಾಲ್ (ಮಂಟಪ) ಗಳಲ್ಲಿ ಅಗತ್ಯವಿರುವ ವಿದ್ಯುತ್ ಸಂಪರ್ಕ ಹಾಗೂ ಅಲಂಕಾರಿಕ ದೀಪಗಳ ಅಳವಡಿಕೆ ಕೆಲಸವನ್ನು ಕಡ್ಡಾಯವಾಗಿ ನುರಿತ ಮತ್ತು ಪರವಾನಗಿ ಹೊಂದಿದ ವಿದ್ಯುತ್ ವೈರ್‌ಮನ್‌ಗಳಿಂದಲೇ ಮಾಡಿಸಬೇಕು. ಸಾರ್ವಜನಿಕರು ಅಥವಾ ಉತ್ಸವ ಸಮಿತಿಯ ಸದಸ್ಯರು ಯಾವುದೇ ಕಾರಣಕ್ಕೂ ತಾವೇ ಸ್ವತಃ ವಿದ್ಯುತ್ ಕಂಬವೇರುವುದು ಅಥವಾ ವಿದ್ಯುತ್ ಜೋಡಣೆ ಮಾಡುವಂತಹ ಕೆಲಸಗಳನ್ನು ಮಾಡಲು ಹೋಗಬಾರದು.

ಎಲ್ಲಾ ಗಣೇಶ ಮಹಾಮಂಡಳಗಳು ವಿದ್ಯುತ್ ಸುರಕ್ಷತೆಯ ಬಗ್ಗೆ ವಿಶೇಷ ಗಮನಹರಿಸಿ, ಅತ್ಯಂತ ಜಾಗ್ರತೆಯಿಂದ ಹಾಗೂ ಸಡಗರದಿಂದ ಹಬ್ಬವನ್ನು ಆಚರಿಸಲು ಕೋರಲಾಗಿದೆ.
ಯಾವುದೇ ವಿದ್ಯುತ್ ಸಂಬಂಧಿತ ತುರ್ತು ಪರಿಸ್ಥಿತಿ, ದೂರುಗಳು ಅಥವಾ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಹೆಸ್ಕಾಂನ ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡಬಹುದು. ಅಥವಾ ತಮ್ಮ ವ್ಯಾಪ್ತಿಯ ಹೆಸ್ಕಾಂ ಸ್ಥಳೀಯ ಶಾಖಾ ಕಚೇರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಸಂಪಕೋರಲಾಗಿದೆೆ ಪ್ರಕಟಣೆಯಲ್ಲಿ ಕೋರಲಾಗಿದೆ.