ಬೆಂಗಳೂರು : ಸಚಿವ ಸತೀಶ್ ಜಾರಕಿಹೊಳಿ‌ ಕುಟುಂಬ ಹಾಗೂ ಆಪ್ತರ ಮನೆ ಮೇಲೆ ನಡೆದ ಇಡಿ ದಾಳಿಯನ್ನು ಉದ್ಯಮಿ ವಿಜಯ್ ಮಲ್ಯ ತೀವ್ರವಾಗಿ ಖಂಡಿಸಿದ್ದು ಈ‌ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇಡಿ ಬಿಂಬಿಸುವಂತೆ ಚಾರ್ಜ್ ಶೀಟ್ ಹಾಕದೆ ವಿಚಾರಣೆ ನಡೆಸದೆ ಸಾರ್ವಜನಿಕವಾಗಿ ವ್ಯಕ್ತಿಯ ವ್ಯಕ್ತಿತ್ವ ಹರಣ ಮಾಡಲಾಗುತ್ತಿದೆ. ಬೇರೆ ಯಾವುದೇ ದೇಶದಲ್ಲಿ ಈ ರೀತಿ ಘಟನೆ ನಡೆಯುವುದಿಲ್ಲ. ನಿಮ್ಮೊಳಗೆ ನೀವೆ ಯೋಚಿಸಿ ಎಂದು ವಿಜಯ್ ಮಲ್ಯ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ಖಂಡಿಸಿದ್ದಾರೆ.‌

ನ್ಯಾಯಯುತ ವಿಚಾರಣೆ ನಡೆಯದೆ ಯಾವುದೇ ದೇಶದಲ್ಲಿ ತನಿಖಾ ಸಂಸ್ಥೆಯು ತನ್ನ ಕ್ರಮಗಳ ಕುರಿತು ಮಾತನಾಡುವುದಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ವಿಜಯ್ ಮಲ್ಯ ಸ್ವತಂತ್ರ ತನಿಖಾ ಸಂಸ್ಥೆಗಳ ವಿರುದ್ಧ ಕಿಡಿಕಾರಿದ್ದಾರೆ.‌

ಎಕ್ಸ್ ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಮಲ್ಯ ಸಿಬಿಐ ಹಾಗೂ ಇಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸತ್ಯ ತಿಳಿದುಕೊಳ್ಳಲು ಬಯಸುವವರಿಗೆ ಇಡಿ ಹಾಗೂ ಸಿಬಿಐ ಸೃಷ್ಟಿ ಸಿರುವ ಸುಳ್ಳು ಆರೋಪಗಳ ಕುರಿತು ಬಹಿರಂದಪಡಿಸುವೆ. ಈ ಸಂಸ್ಥೆಗಳು ವಂಚನೆಯಲ್ಲಿ ತುಂಬಾ ಪರಿಣಿತರು ಎಂದು ಹೇಳಿದ್ದಾರೆ.