ಬೆಳಗಾವಿ : ಜಾರಕಿಹೊಳಿ ಕುಟುಂಬದ ವಿರುದ್ಧ ಇಡಿ ದಾಳಿ ಖಂಡನೀಯ, ನಾನು ಆ ಕುಟುಂಬದ ಸಲುವಾಗಿ ರಕ್ತ ಮೊಡಲು ಸಿದ್ಧ, ಕೇಂದ್ರ ಸರಕಾರ ದಾಳಿ ಕೆಲಸ ನಿಲ್ಲಿಸುವಂತೆ ಅಭಿಮಾನಿಯೋರ್ವ ಶರ್ಟ್ ಹರಿದುಕೊಂಡು ಆಕ್ರೋಶ ಹೊರಹಾಕಿದ ಘಟನೆ ಗೋಕಾಕ್ ನಲ್ಲಿ ನಡೆದಿದೆ.
ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿ ಖಂಡಿಸಿ ಗೋಕಾಕ್ ಪಟ್ಟಣದಲ್ಲಿ ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ ನಡೆಯುತು. ಈ ವೇಳೆ ಇಡಿ ದಾಳಿ ಖಂಡಿಸಿದ ಅಭಿಮಾನಿಗಳು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.



