ಬೆಳಗಾವಿ : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ನಿನ್ನೆಯಿಂದ ದಾಳಿ ನಡೆಸಿದ್ದು ನಿರಂತರ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸಧ್ಯ ಸಚಿವರ ಗೋಕಾಕ್ ನಿವಾಸದ ಮೇಲೆ ಇಡಿ ಅಧಿಕಾರಿಗಳಿಂದ ದಾಳಿ ಮುಂದುವರಿದಿದ್ದು ಟ್ರಂಕ್ ಜೊತೆಗೆ ಬ್ಯಾಂಕ್ ಸಿಬ್ಬಂದಿ ಮನೆಗೆ ಆಗಮಿಸಿದ್ದಾರೆ.
ಸಚಿವರ ಮನೆಯಲ್ಲಿ ಸುಮಾರು ಒಂದು ಕೋಟಿ ರೂ. ಹಣ ಪತ್ತೆಯಾಗಿದೆ ಎಂದು ಇಡಿ ಮೂಲಗಳಿಂದ ತಿಳಿದುಬರುತ್ತಿದೆ. ಇನ್ನೂ ಬೆಳಗಾವಿಯ ವೈ ಮಂಜುನಾಥ ಸೇರಿ ಸಚಿವರ ಆಪ್ತರ ಮನೆ ಮೇಲೆ ಇಡಿ ದಾಳಿ ಮುಂದುವರಿದಿದೆ.


