ಬೆಂಗಳೂರು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ (ಎಐಸಿಸಿ)ಯು ಕರ್ನಾಟಕ ರಾಜ್ಯದ ಜಿಲ್ಲಾ ಸಮಿತಿಗಳಿಗೆ (ಡಿಸಿಸಿ) ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೆ.9ರಂದು ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಈ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ. ಪಕ್ಷ ನಡೆಸಿದ ‘ಸಂಘಟನ ಸೃಜನ ಅಭಿಯಾನ’ದಡಿ ಪ್ರತೀ ಜಿಲ್ಲೆಗೆ ನಿಯೋಜಿಸಲಾಗಿದ್ದ ಎಐಸಿಸಿ ವೀಕ್ಷಕರು ಸಲ್ಲಿಸಿದ ವರದಿಯ ಆಧಾರದಲ್ಲಿ ಹಾಗೂ ವೀಕ್ಷಕರು ಮತ್ತು ಹಿರಿಯ ನಾಯಕರೊಂದಿಗೆ ವೈಯಕ್ತಿಕವಾಗಿ ಚರ್ಚಿಸಿದ ಬಳಿಕ ಜಿಲ್ಲಾಧ್ಯಕ್ಷರ ನೇಮಕವನ್ನು ಅಂತಿಮಗೊಳಿಸಲಾಗಿದೆ ಎಂದು ವೇಣುಗೋಪಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನೂತನ ಡಿಸಿಸಿ ಅಧ್ಯಕ್ಷರ ವಿವರ ಇಂತಿವ

ಚಿಕ್ಕೋಡಿ : ಲಕ್ಷ್ಮಣರಾವ್ ಚಿಂಗಳೆ
ಬೆಳಗಾವಿ ನಗರ: ಸಲಾಉದ್ದೀನ್ ಸಿ. ಸಲೀಂ / ಬಿ. ಖಾತೀಬ್ (ರಾಜಸಲೀಮ್)
ಬೆಳಗಾವಿ ಗ್ರಾಮಾಂತರ: ಬಸವರಾಜ್ ಶೆಗಾವಿ
ದಕ್ಷಿಣ ಕನ್ನಡ:     ಪದ್ಮರಾಜ್ ಆರ್. ಪೂಜಾರಿ
ಉಡುಪಿ:             ಕಿಶನ್ ಕುಮಾರ್ ಹೆಗ್ಡೆ ಕೊಳ್ಳೆಬೈಲು
ಉತ್ತರ ಕನ್ನಡ:     ಗಜಾನನ ತಿಮ್ಮ ನಾಯ್ಕ

ಬಾಗಲಕೋಟೆ: ದಯಾನಂದ್ ಎಸ್. ಪಾಟೀಲ್
ಬೆಂಗಳೂರು ಉತ್ತರ: ಅಬ್ದುಲ್ ವಾಜಿದ್
ಬೆಂಗಳೂರು ದಕ್ಷಿಣ: ಒ. ಮಂಜುನಾಥ್
ಬೆಂಗಳೂರು ಪೂರ್ವ: ಡಿ.ಕೆ. ಮೋಹನ್ ಬಾಬು
ಬೆಂಗಳೂರು ಪಶ್ಚಿಮ: ಹನುಮಂತರಾಯಪ್ಪ
ಬೆಂಗಳೂರು ಕೇಂದ್ರ: ಜೆ. ಶರವಣನ್

ಬೆಂಗಳೂರು ಗ್ರಾಮಾಂತರ: ಸಿ. ಪ್ರಸನ್ನ ಕುಮಾರ್
ಬಳ್ಳಾರಿ ನಗರ: ಅಲ್ಲಂ ಪ್ರಶಾಂತ್
ಬಳ್ಳಾರಿ ಗ್ರಾಮಾಂತರ : ಕೆ. ಮಲ್ಲಿಕಾರ್ಜುನ
ಬೀದರ್ : ಅಬ್ದುಲ್ ಮನ್ನಾನ್ ಸೇಠ್
ಚಾಮರಾಜನಗರ ಜೆ. ಯೋಗೇಶ್
ಚಿಕ್ಕಮಗಳೂರು : ಎಚ್.ಪಿ. ಮಂಜೇಗೌಡ

ದಾವಣಗೆರೆ :ಇಬ್ರಾಹಿಂ ಖಲೀಲುಲ್ಲಾ
ಧಾರವಾಡ ಗ್ರಾಮಾಂತರ : ಚಂದ್ರಶೇಖರ ಜುಟ್ಟಲ್
ಗದಗ: ವಾಸಣ್ಣ ಕುರ್ಡಗಿ
ಕಲಬುರಗಿ : ಡಾ. ಕಿರಣ್ ಎ. ದೇಶಮುಖ್
ಹಾಸನ : ಶಶಿಧರ್ ಜಿ. ಬಿ.
ಹಾವೇರಿ : ಸಂಜೀಬ್ ಕುಮಾರ್ ನೀರಲಗಿ
ಹುಬ್ಬಳ್ಳಿ-ಧಾರವಾಡ ನಗರ : ಸಪದಾನಂದ ವಿ. ದಂಗನಾವರ

ಕೊಡಗು : ಧರ್ಮಜ ಉತ್ತಪ್ಪ
ಕೋಲಾರ  :ಎನ್. ನಾರಾಯಣಸ್ವಾಮಿ
ಮಂಡ್ಯ: ಕುಮಾರ್ ಕೊಪ್ಪ
ಮೈಸೂರು ನಗರ: ಆರ್. ಮೂರ್ತಿ
ಮೈಸೂರು ಗ್ರಾಮಾಂತರ: ಬೀರಿ ಹುಂಡಿ ಬಸವಣ್ಣ
ರಾಯಚೂರು : ಕೆ. ಶಾಂತಪ್ಪ

ಕೊಪ್ಪಳ : ಮಲ್ಲಿಕಾರ್ಜುನ ನಾಗಪ್ಪ
ರಾಮನಗರ : ಸಿ.ಎನ್. ವೆಂಕಟೇಶ್
ಶಿವಮೊಗ್ಗ :  ಎಚ್.ಸಿ. ಯೋಗೇಶ್
ಯಾದಗಿರಿ: ಬಸರೆಡ್ಡಿ ಎಂ. ಪಾಟೀಲ್