ಬೆಳಗಾವಿ : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು ಹಣದ ಅಕ್ರಮ ವಹಿವಾಟಿನ ಕುರಿತು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.

ಆಫ್ರಿಕಾ ದೇಶದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವ ಆರೋಪದ ಮೇಲೆ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂಬ ಅಂಶವನ್ನು ಇಡಿ ಬಯಲು ಮಾಡಿದೆ. ಕೋಟ್ಯಾಂತರ ರೂ. ಹಣವನ್ನು ವಿದೇಶದಲ್ಲಿ ಹೂಡಿಕೆ‌ ಮಾಡಿರುವ ಆರೋಪ ಸಚಿವರಮೇಲೆ ಕೇಳಿಬಂದಿದೆ.

ಈ ಮಧ್ಯೆ ಆಫ್ರಿಕಾದಲ್ಲಿ ಮೈನಿಂಗ್ ಬ್ಯುಸಿನೆಸ್ ನಡೆಸಲಾಗುತ್ತಿದೆ ಎಂಬ ಗುರುತರ ಆರೋಪ ಕೇಳಿಬಂದಿದ್ದು ಬೃಹತ್ ಮಟ್ಟದ ಕಂಪನಿಗೆ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಹಾಗೂ ಸಹೋದರಿಯೇ ಇದಕ್ಕೆ ನಿರ್ದೇಶಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆಫ್ರಿಕಾದಲ್ಲಿ ಕೋಟ್ಯಾಂತರ ಹಣ ಹೂಡಿಕೆ ಮಾಡಿರಯವ ಮೂಲಗಳ ಹಿಂದೆ ಸಚಿವರ ಪಾಲು ಇದೇ ಎಂಬ ಆರೋಪದ ಮೇಲೆ ಇಡಿ ದಾಖಲೆ ಪರಿಶೀಲನೆ ‌ನಡೆಸುತ್ತಿದೆ. ಹಾಗಾದರೆ ಜಾರಕಿಹೊಳಿ ಕುಟುಂಬದ ಜೊತೆ ಆಫ್ರಿಕಾದ ಅಧಿಕಾರಿಗಳ ಆಪ್ತತೆ ಕುರಿತು ಪ್ರಶಸ್ತಿ ಎದ್ದಿದೆ.

ಕಳೆದ ಕೆಲ ದಿನಗಳ ಹಿಂದೆ ಪೂರ್ವ ಆಫ್ರಿಕಾದ ರುವಾಂಡಾ ದೇಶದ ರಾಯಭಾರಿ ಜಾಕ್ವೆಲಿನ್ ಮುಕಂಜಿರಾ ಅವರು ಬೆಳಗಾವಿಗೆ ಭೇಟಿ ನೀಡಿದ್ದರು. ಈ ವೇಳೆ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಸಭೆ ಆಯೋಜನೆ ಮಾಡಿತ್ತು ಎಂಬ ಮಾಹಿತಿ ಬಯಲಾಗಿದೆ.

ಅಷ್ಟೇ ಅಲ್ಲದೆ ರುವಾಂಡಾ ದೇಶದ ರಾಯಭಾರಿ ಗೋಕಾಕ್ ನಗರಕ್ಕೂ ಭೇಟಿ ನೀಡಿದ್ದರು. ಸತಿಶ್ ಶುಗರ್ಸ್ ಮತ್ತು ಪ್ರಿಯಾಶಕ್ತಿ ಸ್ಟೀಲ್ ಘಟಕಕ್ಕೆ ಭೇಟಿನೀಡಿ ಕಾರ್ಯವಿಧಾನದ ಕುರಿತು ಇಬರು ಮಾಹಿತಿ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ರಾಹುಲ್ ಜಾರಕಿಹೊಳಿ ಉಪಸ್ಥಿತರಿದ್ದು ರುವಾಂಡಾ ದೇಶದ ಅಧಿಕಾರಿಗೆ ಆತಿಥ್ಯ ನೀಡಿದ್ದರು.