ಬೆಳಗಾವಿ : ಕೈದಿಯ ಜೊತೆ ಜೈಲು ಅಧಿಕಾರಿಯೊಬ್ಬರು ಬೆತ್ತಲೆ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಬೆಳಕಿಗೆ ತಂದಿದ್ದ ಸಂಧ್ಯಾ ಪವಿತ್ರ ( Sandya Pavitra ) ಎಂಬುವವರಿಗೆ ಬೆಳಗಾವಿ ಎಸ್ಪಿ ನೋಟೀಸ್ ನೀಡಿದ್ದು ತನಿಖೆಗೆ ಹಾಜರಾಗುವಂತೆ ಕೋರಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ.
ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಬೆಂಗಳೂರು ಮೂಲದ ಮಹಿಳೆ ಸಧ್ಯ ಪವಿತ್ರ. ಒಬ್ಬ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿ ಕೈದಿ ಮುಂದೆ ಬಟ್ಟೆ ಬಿಚ್ಚಿರುವ ವೀಡಿಯೋ ಇಡೀ ದೇಶ ನೋಡಿದೆ. ಅವಳ ಮೇಲೆ ಈವರೆಗೆ ಕ್ರಮ ಆಗಿಲ್ಲ. ಆದರೆ ಸರಕಾರಿ ಅಧಿಕಾರಿ ಅಸಲಿ ಮುಖ ಬಿಚ್ಚಿಟ್ಟ ನಮಗೆ ಪೊಲೀಸರು ನೋಟೀಸ್ ಕೊಟ್ಟು ಕಿರಿಕಿರಿ ಮಾಡುತ್ತಿದ್ದಾರೆ ಎಂದರು.
ಕೈದಿ ಜೊತೆ ವೀಡಿಯೋ ಕಾಲ್ ಮಾಡಿರುವ ಅಧಿಕಾರಿಗಾಗಿ ನಾನು ಹಣ ಖರ್ಚು ಮಾಡಲಾರೆ. ಪೊಲೀಸ್ ಇಲಾಖೆ ಬೆಂಗಳೂರಿನಿಂದ ಬೆಳಗಾವಿಗೆ ಬರಲು ಬಸ್ ಚಾರ್ಜ್ ನೀಡಿದರೆ ನಾನು ವಿಚಾರಣೆಗೆ ಹಾಜರಾಗುವೆ ಎಂದು ವೀಡಿಯೋ ಹರಿಬಿಟ್ಟಿದ್ದಾಳೆ.


