ಬೆಂಗಳೂರು : ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು (Police Officer) ಜೈಲಿನಲ್ಲಿದ್ದ ಕೈದಿಗಳೊಂದಿಗೆ ವಿಡಿಯೋ ಕಾಲ್ (Video Call) ಮೂಲಕ ಸರಸವಾಡಿ ಬೆತ್ತಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಆರ್. ಜಯಶ್ರೀ ಎಂಬ ಮಹಿಳಾ ಪೊಲೀಸ್ ವಿರುದ್ಧ ಈ ಸಂಬಂಧ ಲೋಕಾಯುಕ್ತದಲ್ಲಿ (Lokayukta) ದೂರು ದಾಖಲಾಗಿದೆ. ಈ ಕೃತ್ಯವು ಸುಮಾರು ಎರಡು ವರ್ಷಗಳ ಹಿಂದೆ ನಡೆದಿದ್ದು, ಪ್ರಸಕ್ತ ಇದರ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ಪೊಲೀಸ್ ಸಮವಸ್ತ್ರದಲ್ಲೇ ಬೆತ್ತಲೆ ವಿಡಿಯೋ ಕಾಲ್!

ಈ ಹಿಂದೆ ಬೆಳಗಾವಿಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಜಯಶ್ರೀ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈಕೆಯ ಹಣ ಪಡೆದುಕೊಂಡು ಕೈದಿಗಳಿಗೆ ಜೈಲಿನಲ್ಲೇ ಐಷಾರಾಮಿ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಿದ್ದಳು ಎನ್ನಲಾಗಿದೆ. ಅಷ್ಟೇ ಅಲ್ಲದೆ, ತನ್ನ ಕ್ವಾರ್ಟರ್ಸ್‌ನಲ್ಲೇ ಕುಳಿತು ಪೊಲೀಸ್ ಸಮವಸ್ತ್ರದಲ್ಲಿ ಇದ್ದುಕೊಂಡೇ ಕೈದಿಗಳೊಂದಿಗೆ ಬೆತ್ತಲೆ ವಿಡಿಯೋ ಕಾಲ್ ಮಾಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ.

ಖೆಡ್ಡಾಗೆ ಬಿದ್ದ ಅನಾಮಿಕ ಕೈದಿಯಿಂದ ಲೋಕಾಯುಕ್ತಕ್ಕೆ ದೂರು : ಜಯಶ್ರೀ ಅವರ ಬಳಿಯಲ್ಲಿ ಸಿಲುಕಿದ ಅನಾಮಿಕ ಯುವಕನೊಬ್ಬ ದೂರು ನೀಡಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. “ಕೈದಿಗಳಿಗೆ ಊಟ, ತಿಂಡಿ ಕೊಡಲು ಹಾಗೂ ಕುಟುಂಬಸ್ಥರನ್ನು ಭೇಟಿಯಾಗಲು ಈ ಹಣ ಕೇಳುತ್ತಿದ್ದಳು. ಸುಮಾರು 40 ಸಾವಿರ ರೂ. ಲಂಚ ಪಡೆದು ಈ ರೀತಿ ವಿಡಿಯೋ ಕಾಲ್ ಮಾಡಿದ್ದಾಳೆ. ನನ್ನಂತೆಯೇ ಹಲವು ಜೈಲು ಕೈದಿಗಳೊಂದಿಗೆ ಈಕೆ ಸಂಪರ್ಕವಿದ್ದು, ದೂರೂ ನೀಡಲು ಯಾರೂ ಮುಂದೆ ಬರುವುದಿಲ್ಲ,” ಎಂದು ಯುವಕ ದೂರಿದ್ದಾನೆ.

ಇಷ್ಟೆಲ್ಲಾ ಗಂಭೀರ ಆರೋಪಗಳು ಹಾಗೂ ವೀಡಿಯೋ ಸಾಕ್ಷ್ಯಗಳು ಹೊರಬಿದ್ದರೂ ಈವರೆಗೂ ಜಯಶ್ರೀ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಲೋಲಾಯುಕ್ತದಲ್ಲಿ ದಾಖಲಾದ ದೂರಿನ ನಂತರ ಯಾವ ಕ್ರಮ ಆಗುತ್ತದೆ ಕಾದು ನೋಡಬೇಕು.