ಕೋಳಿಗುಡ್ಡ : ವೀರಶೈವ ಜಂಗಮ ಸಮಾಜವನ್ನು ಸಂಘಟನಾತ್ಮಕವಾಗಿ ಒಗ್ಗೂಡಿಸುವ ಉದ್ದೇಶದಿಂದ ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಕೋಳಿಗುಡ್ಡ ಗ್ರಾಮದಲ್ಲಿ ವೀರಶೈವ ಜಂಗಮ ಸಮಾಜ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟನೆ ಮಾಡಲಾಯಿತು.
ಬುಧವಾರ ಗೌರವಾಧ್ಯಕ್ಷರಾದ ವೇದಮೂರ್ತಿ ಬಸಯ್ಯ ಸ್ವಾಮಿಗಳು ಹಾಗೂ ಸಂಘದ ಅಧ್ಯಕ್ಷ ಶಿವಯ್ಯಾ ಮಠಪತಿ ಅವರು ವೀರಶೈವ ಜಂಗಮ ಸಮಾಜ ಕ್ಷೇಮಾಭಿವೃದ್ಧಿ ಸಂಘ. ಕೋಳಿಗುಡ್ಡ ಸಂಘದ ನಾಮಫಲಕವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಗುರುಪೂರ್ಣಿಮೆಯ ನಿಮಿತ್ಯ ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಗಳ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮ ನೆರವೇಸಲಾಯಿತು. ಪೂಜಾ ಕಾರ್ಯಕ್ರಮವನ್ನು ಮಾರ್ಗದರ್ಶಕರಾದ ಕಲ್ಲಯ್ಯ ವಸ್ತ್ರದ ಹಾಗೂ ಸೋಮಯ್ಯಾ ಮಠಪತಿ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಿದ್ದಯ್ಯ ವಸ್ತ್ರದ ಕಾರ್ಯದರ್ಶಿ ಮೃತ್ಯುಂಜಯ ವಸ್ತ್ರದ, ಚನ್ನಯ್ಯಾ ಮಠಪತಿ ಸಂಜು ಮಠಪತಿ ಶ್ರೀಕಾಂತಯ್ಯ ವಸ್ತ್ರದ ಶ್ರೀಶೈಲ ಹಿರೇಮಠ ಬಸಯ್ಯ ಮಠಪತಿ ಗುರುಬಸಯ್ಯ ಮಠಪತಿ ಸುನಿಲ್ ಹಿರೇಮಠ ಹಾಗೂ ಜಂಗಮ ಸಮಾಜದ ಮಕ್ಕಳು ಮಹಿಳೆಯರು ಸರ್ವ ಸದಸ್ಯರು ಉಪಸ್ಥಿತರಿದ್ದರು.
ರಾಜ್ಯದ ಮೂಲೆ, ಮೂಲೆಗಳಲ್ಲಿ ನೆಲೆಸಿರುವ ಜಗಮ ಸಮಾಜದ ಬಾಂಧವರು ಸಂಘಟನಾತ್ಮಕವಾಗಿ ಒಂದುಗೂಡಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಿ ದೇಶದ ಬೆಳವಣಿಗೆಗೆ ಶ್ರಮಿಸುವಂತಾಗಬೇಕೆಂದು


