ಬೆಳಗಾವಿ : ಸಿಸಿಪಿ ಪೊಲೀಸರ ಕಾರ್ಯಾಚರಣೆ ವೇಳೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಗಾಂಜಾ ಮಾರಾಟ ಮಾಡುವ ವೇಳೆ ಬಂಧಿಸಿರುವ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಹುಂಚಾನಟ್ಟಿ ಗ್ರಾಮದ ಆಕಾಶ ದೊಡಮನಿ ಬಂದಿತ ಆರೋಪಿ. ಈತನ ವಿರುದ್ಧ ಕೊಲೆ ಆರೋಪ ಇದ್ದು ಪೊಲೀಸ್ ದಾಳಿಯ ವೇಳೆ ಪರಾರಿಯಾಗಿದ್ದ.
ಕಳೆದ ಶುಕ್ರವಾರ ಗಾಂಜಾ ಮಾರಾಟ ಮಾಡುವ ವೇಳೆ ಸಿಸಿಬಿ ಠಾಣೆ ಪಿಎಸ್ಐ ಮಂಜುನಾಥ ಭಜಂತ್ರಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಬಂಧಿತನಿಂದ 80 ಸಾವಿರ ಮೌಲ್ಯದ 1.7 ಕೆಜಿ ಗಾಂಜಾ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸಿಬ್ಬಂದಿ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.



