ಬೆಳಗಾವಿ : ವೋಟರ್ ಐಡಿ ಪರಿಷ್ಕರಣೆ ಹಾಗೂ ಎಸ್ಐಆರ್ ಕಾರ್ಯದ ವೇಳೆ ಶಿಕ್ಷಕರೊಬ್ಬರು ಬಲಿಯಾಗಿರುವುದು ಕರಾಳ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ಮೃತರನ್ನು ಅಥಣಿ ಪಟ್ಟಣದ ನಿವಾಸಿ ಹಾಗೂ ರಾಯಬಾಗ ತಾಲೂಕಿನ ನಿಲಜಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಪ್ರಕಾಶ್ ಕಾಂಬಳೆ ಎಂದು ಗುರುತಿಸಲಾಗಿದೆ. ಅವರು ಶಾಲೆಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದವರಾಗಿದ್ದು, ಜತೆಗೆ ಬೂತ್ ಮಟ್ಟದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಳೆದ ಕೆಲವು ದಿನಗಳಿಂದ ಎಸ್ಐಆರ್ ಕೆಲಸದ ಅತಿಯಾದ ಒತ್ತಡದಿಂದ ಪ್ರಕಾಶ್ ಕಾಂಬಳೆ ಅವರು ತೀವ್ರ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದರು ಎನ್ನಲಾಗಿದೆ. ಪ್ರತಿದಿನ ಕರ್ತವ್ಯ ಮುಗಿಸಿ ಮನೆಗೆ ಬಂದ ಬಳಿಕ, “ಎಸ್ಐಆರ್ ಕೆಲಸ ತುಂಬಾ ಬಾಕಿ ಇದೆ, ಬೇಗ ಮುಗಿಸಬೇಕು. ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದೆ” ಎಂದು ಪತ್ನಿ ಹಾಗೂ ಕುಟುಂಬದವರ ಬಳಿ ತಮ್ಮ ಆತಂಕವನ್ನು ತೋಡಿಕೊಂಡಿದ್ದರು ಎಂದು ಹೇಳಲಾಗಿದೆ.
ಆತಿಯಾದ ಕಲಸದ ಒತ್ತಡ ಹಾಗೂ ಆತಂಕದಿಂದಾಗಿ ಅವರ ರಕ್ತದೊತ್ತಡ ಹೆಚ್ಚಿತ್ತು, ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ತಕ್ಷಣವೇ ಚಿಕಿತ್ಸೆಗೆ ಸ್ಪಂದಿಸಿದ ಅವರು ಕೊನೆಯುಸಿರೆಳೆದಿದ್ದಾರೆ.
ನನ್ನ ಪತಿಯ ಸಾವಿಗೆ ಎಸ್ಐಆರ್ ಕಾಯ್ದೆ ಒತ್ತಡವೇ ನೇರ ಕಾರಣ” ಎಂದು ಮೃತರ ಪತ್ನಿ ಮಾಲಾ ಪ್ರಕಾಶ್ ಕಾಂಬಳೆ ಕಣ್ಣೀರು ಹಾಕುತ್ತ ಆರೋಪಿಸಿದ್ದಾರೆ. ಪ್ರಕಾಶ್ ಕಾಂಬಳೆ ಅವರ ಅಕಾಲಿಕ ನಿಧನದಿಂದ ಅಧಣಿಯ ಅವರ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತೀಚೆಗೆ ಎಸ್ಐಆರ್ ಕಾಯ್ದೆ ಒತ್ತಡದಿಂದ ಸರಣಿ ಸಾವುಗಳು ಸಂಭವಿಸುತ್ತಿರುವುದು ಶಿಕ್ಷಕರ ವಲಯದಲ್ಲಿ ತೀವ್ರ ಆಕ್ರೋಶ ಹಾಗೂ ತೋಕದ ಕಾರಣಕಾರ್ಯದೊತ್ತಡಕುರಿತು ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.



