ಮುಂಬೈ : ಸೀರೆ ತರಲಿಲ್ಲ ಎಂದು ಕ್ಷುಲ್ಲಕ ಕಾರಣಕ್ಕೆ ದುಂಪತಿ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ (Crime) ಆಘಾತಕಾರಿ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಬದ್ಲಾಪುರ ಪೂರ್ವದಲ್ಲಿ ನಡೆದಿದೆ.

ಪತಿಯನ್ನು ಕುಕ್ಕರ್ ಮುಚ್ಚಳದಿಂದ ತಲೆಗೆ ಹೊಡೆದು, ಉಸಿರುಗಟ್ಟಿಸಿ ಹತ್ಯೆ ಮಾಡಿದ 30 ವರ್ಷದ ಸುನಿತಾದೇವಿ ಹರೇರಾಮ್ ಸಿಂಗ್ ಎಂಬಾಕೆಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮೂಲತಃ ಬಿಹಾರದ ರೋಹ್ತಾಸ್ ಜಿಲ್ಲೆಯ ಹರೇರಾಮ್ ಕಿಶುಂಜಿ ಸಿಂಗ್ (35) ಮತ್ತು ಸುನಿತಾದೇವಿ ದಂಪತಿ ಬದ್ಲಾಪುರ ಪೂರ್ವದ ವಾಸ್ತಾಗಿರುತ್ತಾರೆ. ಜುಲೈ 19 ರಂದು ಪತಿ ಮನೆಗೆ ಬಂದಾಗ, ತನಗೆ ಸೀರೆ ತಂದಿಲ್ಲ ಎಂಬ ಕಾರಣಕ್ಕೆ ಸುನಿತಾದೇವಿ ಜಗಳ ತೆಗೆಯುತ್ತಿದ್ದಾಳೆ.

ದಂಪತಿ ನಡುವೆ ಮಾತಿಗೆ ಮಾತು ಬೆಳೆದು ತೀವ್ರ ಆಕ್ರೋಶಗೊಂಡ ಪತ್ನಿ, ಮನೆಯಲ್ಲಿ ಇದ್ದ ಪ್ರೆಷರ್ ಕುಕ್ಕರ್‌ನ ಮುಚ್ಚಳದಿಂದ ಪತಿಯ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾಳೆ. ಬಳಿಕ ಆತನ ಕುತ್ತಿಗೆ ಹಿಸುಕಿ ದಾರುಣವಾಗಿ ಹತ್ಯೆ ಮಾಡಿದ್ದಾಳೆ.

ಗಂಡನ ಸಾವಿನ ನಂತರ ಸುನಿತಾದೇವಿ ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದಾಳೆ.‌ ಪತಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾಳೆ‌ ಎಂದು ಸುಳ್ಳು ಕಥೆ ಸೃಷ್ಟಿ ಮಾಡಿದ್ದಾಳೆ. ಕೊನೆಗೆ ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲಾಗಿದೆ.