ಬೆಳಗಾವಿ : ಜಿಲ್ಲೆಯ ಅನೇಕ ತಾಲೂಕು ಕೇಂದ್ರಗಳಲ್ಲಿ ಸಂಚಾರ ದಟ್ಟಣೆಯಿಂದ ಆಗುತ್ತಿರುವ ಸಮಸ್ಯೆ ಹಾಗೂ ಸಂಚಾರಿ ನಿಯಮ ಪಾಲನೆ ಹಿನ್ನೆಲೆಯಲ್ಲಿ ಟ್ರಾಫಿಕ್ ‌ಸಿಗ್ನಲ್ ಗಳಲ್ಲಿ ಅಳವಡಿಸಲಾಗಿದ್ದ AI ಕ್ಯಾಮೆರಾಗಳು ಅನೇಕದ ನಿದ್ದೆಗೆಡಿಸಿವೆ. ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಬರೋಬ್ಬರಿ ಬುದ್ದಿ ಕಲಿಸುತ್ತಿವೆ.

ಹೌದು ಬೆಳಗಾವಿ ಜಿಲ್ಲೆಯ ಅನೇಕ ತಾಲೂಕು ‌ಕೇಂದ್ರದ ಜನದಟ್ಟಣೆ ಪ್ರದೇಶದಲ್ಲಿ ಏಐ ಕ್ಯಾಮರಾ ಅಳವಡಿಕೆ ಮಾಡಲಾಗಿದೆ‌. ಬೈಲಹೊಂಗಲ, ಅಥಣಿ ಸೇರಿದಂತೆ ‌ಅನೇಕ ಪಟ್ಟಣಗಳ ಜನ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಸಧ್ಯ ಎಐ ಕಣ್ಗಾವಲು ಇದೆ.

ಸಧ್ಯ ಬೆಳಗಾವಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಜೂನ್ 4 ರಿಂದ ಜುಲೈ 15 ರ ವೇಳೆಗೆ ಸಂಚಾರಿ ನಿಯಮ ಉಲ್ಲಂಘಿಸಿದ 2,33892 ಪ್ರಕರಣಗಳು ದಾಖಲಾಗಿವಿ. ಪ್ರತಿದಿನ ಸರಿಸುಮಾರು 5,670 ಪ್ರಕರಣ ದಾಖಲಾಗಿವೆ.

ಹೆಲ್ಮೆಟ್ ಇಲ್ಲದೆ ವಾಹನ ಸವಾರ ಮಾಡಿರುವ 68025 ಪ್ರಕರಣ ದಾಖಲಾಗಿದ್ದರೆ ಸೀಟ್ ಬೆಲ್ಟ್ ಇಲ್ಲದ 30,536 ಪ್ರಕರಣ ದಾಖಲಾಗಿವೆ. ಟ್ರಿಪಲ್ ರೈಡಿಂಗ್, ಸಂಚರಿಸುವಾಗ ಮೊಬೈಲ್ ಬಳಕೆ ಸೇರಿ ಒಟ್ಟು 1 ಲಕ್ಷ 161 ಪ್ರಕರಣ ದಾಖಲಾಗಿವೆ.‌

ಹೆಲ್ಮೆಟ್ ಇಲ್ಲದೆ ವಾಹನ ಸಂಚಾರ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 3 ಕೋಟಿ ರೂ. ಅಧಿಕ ದಂಡ ಹಾಕಲಾಗಿದೆ. ಎಲ್ಲಾ ಪ್ರಕರಣಕ್ಕೆ ಸೇರಿ 5 ಕೋಟಿ. ಗೂ ಅಧಿಕ ದಂಡ ವಿಧಿಸಲಾಗಿದೆ‌. ಒಟ್ಟಿನಲ್ಲಿ ಎಐ ಕ್ಯಾಮೆರಾದಿಂದ ಜನಕ್ಕೆ ಸಂಚಾರ ನಿಯಮದ ಮೇಲೆ ಭಯ ಜಾಸ್ತಿ ‌ಮಾಡಿದ್ದಂತು ಸುಳ್ಳಲ್ಲ.