ಅಥಣಿ :  ರೋಟರಿ ಕ್ಲಬ್ ಹಾಗೂ  ಮಹಾಲಕ್ಷ್ಮೀ ಸೆಂಟ್ರಲ್‌ ಇವರು ಕೊಡ ಮಾಡುವ  ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿಯನ್ನು   ತಾಲೂಕಿನ ಸಪ್ತಸಾಗರ ಗ್ರಾಮದ ಪ್ರಗತಿಪರ ರೈತ ಹಾಗೂ ಉದ್ಯಮಿ  ಸಂಜಯ ಬಾಬಾಸಾಹೇಬ ನಾಡಗೌಡ ಅವರಿಗೆ ಪ್ರದಾನ ಮಾಡಲಾಯಿತು.

ಸಾವಯುವ ಕೃಷಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ರೈತರಿಗೆ ಉಚಿತ ಮಾರ್ಗದರ್ಶನ ಮತ್ತು  ಜೈವಿಕ ಗೊಬ್ಬರ ಮತ್ತು ಔಷಧಿಗಳನ್ನು  ಸಿದ್ಧಪಡಿಸಿ  ರಿಯಾಯಿತಿ ದರದಲ್ಲಿ ನೀಡುವದ ಜೊತೆಗೆ ಅನೇಕ ಸಮಾಜಮುಖಿ ಸೇವೆಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಇವರ ಈ ಅಪರೂಪದ ರೈತರ ಸೇವೆಯನ್ನ ಗುರುತಿಸಿ  ಕಳೆದ ದಿ. 12 ರಂದು  ಬೆಂಗಳೂರಿನ ರೋಟರಿ ಸಂಸ್ಥೆಯಿಂದ ನಡೆದ  ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ಸಂಜಯ  ನಾಡಗೌಡ ದಂಪತಿಗೆ ಪ್ರಶಸ್ತಿ  ನೀಡಿ ಅಭಿನಂದಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರಿಗೆ ಶಾಸಕ ಲಕ್ಷ್ಮಣ ಸವದಿ ಸೇರಿದಂತೆ  ತಾಲೂಕಿನ ರೈತ ಬಾಂಧವರು, ರೈತ ಮುಖಂಡರು, ಅವರ ಅಭಿಮಾನಿಗಳು ಅಭಿನಂದಿಸಿದ್ದಾರೆ.