ಅಥಣಿ : ಹೊಸ ಜೀವನಕ್ಕೆ ಕಾಲಿಟ್ಟ ನವದಂಪತಿಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶುಭಹಾರೈಸಿದ್ದಾರೆ.

ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ರಾಜು ಜಮಖಂಡಿಕರ್ ಅವರ ಮಗನ ಮದುವೆ ಸಮಾರಂಭದಲ್ಲಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ಈ‌ ವೇಳೆ ಕುಟುಂಬದವರ ಜೊತೆ ಸೇರಿ ಪ್ರೀತಿಯ ಭೋಜನ ಸವಿದ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜು ಜಮಖಂಡಿಕರ್ ಅವರ ಪ್ರೀತಿಯ ಆಮಂತ್ರಣಕ್ಕೆ ಕೃತಜ್ಞತೆ ಸಲ್ಲಿಸಿದರು. ಇನ್ನು ಮದುವೆ ಸಮಾರಂಭಕ್ಕೆ ನಾಡಿನ ಹಿರಿಯ ‌ಪೂಜ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಮಿತ್ರರು ಭಾಗವಹಸಿದ್ದರು.