Select Page

ಸಿಸಿಬಿ ಕಾರ್ಯಾಚರಣೆ ; 5 ಲಕ್ಷ ಮೌಲ್ಯದ ಅಫೀಮು ವಶ

ಸಿಸಿಬಿ ಕಾರ್ಯಾಚರಣೆ ; 5 ಲಕ್ಷ ಮೌಲ್ಯದ ಅಫೀಮು ವಶ



ಬೆಳಗಾವಿ : ಸಿಸಿಬಿ ಪೊಲೀಸರ ನಡೆಸಿದ್ದ ಭರ್ಜರಿ ‌ಕಾರ್ಯಾಚರಣೆಯಲ್ಲಿ ಅಫೀಮು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜಸ್ಥಾನ ಮೂಲದ ಶುಭಂ ಶರ್ಮ (29) ಬಂಧಿತ ಆರೋಪಿ. ರಾಜಸ್ಥಾನದಿಂದ ತಂದ ಅಫೀಮನ್ನು ಬೆಂಗಳೂರು ಮೂಲದ ಖೇತರಾಮ‌ ಚೌದರಿ ಎಂಬಾತನಿಗೆ ಬೆಳಗಾವಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕ ಮಾರಾಟ ಮಾಡುವ ವೇಳೆ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.‌

ಬಂಧಿತನಿಂದ 5.5 ಲಕ್ಷ ರೂ. ಮೌಲ್ಯದ 1.04 ಕಿ.ಗ್ರಾಂ ಬ್ಲ್ಯಾಕ್ ಕಲರ್ ಲಿಕ್ವಿಡ್ ಅಫೀಮ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!