Select Page

Advertisement

ಯುಕನ ತಲೆ ಒಡೆದ ಗುಂಪು : ಗೋಕಾಕ್ ನಲ್ಲಿ ಭೀಕರ ಮಾರಾಮಾರಿ..!

ಯುಕನ ತಲೆ ಒಡೆದ ಗುಂಪು : ಗೋಕಾಕ್ ನಲ್ಲಿ ಭೀಕರ ಮಾರಾಮಾರಿ..!


ಬೆಳಗಾವಿ : ಹಣಕಾಸಿನ ವಿಚಾರಕ್ಕೆ ಎರಡು ಗುಂಪಿನ ನಡುವೆ ಮಾರಕಾಸ್ತ್ರಗಳಿಂದ ಭೀಕರ ಮಾರಾಮಾರಿ ನಡೆದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಲಕ್ಷ್ಮಿ ಬಡಾವಣೆಯಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

ಕೊಟ್ಟ ಸಾಲವನ್ನು ಮರಳಿ ಕೇಳಿದ್ದಕ್ಕೆ ಗಲಾಟೆ ಆರಂಭಗೊಂಡಿದ್ದು, ಬಳಿಕ ಎರಡು ಗುಂಪಿನವರು ಕೈಯಲ್ಲಿ ಕಬ್ಬಿಣದ ರಾಡ್, ಮಚ್ಚು ಹಿಡಿದು ಪರಸ್ಪರ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಮಾರಾಮಾರಿಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಘಟನೆಯಲ್ಲಿ ವರುಣ್ ಸಂತೋಷ್ ಗೊಲ್ಲರ್ (16) ಎಂಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನಾ ಸ್ಥಳಕ್ಕೆ ಗೋಕಾಕ್ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!